You are here
ಹಾಕಿದ ತೇಪೆ ಮತ್ತೆ ಹರಿಯದೇ ಇರಲು ಸಾಧ್ಯವೇ? ಅಂಕಣ 

ಹಾಕಿದ ತೇಪೆ ಮತ್ತೆ ಹರಿಯದೇ ಇರಲು ಸಾಧ್ಯವೇ?

ಸಾಮಾನ್ಯವಾಗಿ ಅಧಿಕಾರದಲ್ಲಿರುವವರು ಅಥವಾ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ನಾಯಕರು ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಾರೆ. ಆದರೆ, ಅಧಿಕಾರದಲ್ಲಿಲ್ಲದ ಪಕ್ಷಗಳಲ್ಲಿ ಹೆಚ್ಚಿನ ಕಿತ್ತಾಟ, ಅಧಿಕಾರದ ದಾಹ ಇರುವುದಿಲ್ಲ. ನಮ್ಮ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿಸದ್ಯಕ್ಕೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಅಧಿಕಾರ ಅನುಭವಿಸುತ್ತಿದ್ದಾರೆ. ಅಧಿಕಾರದಿಂದ ದೂರ ಉಳಿದವರು ಅಧಿಕಾರದ ದಿನಗಳಿಗೆಕಾಯುತ್ತಿದ್ದಾರೆ. ಆದರೆ, ಪ್ರತಿಪಕ್ಷಗಳೆನಿಸಿಕೊಂಡಿರುವ ಭಾರತೀಯ ಜನತಾ ಪಕ್ಷ ಭಾರತೀಯ ಜಗಳ ಪಕ್ಷವಾಗಿ ಮಾರ್ಪಟ್ಟಿದ್ದರೆ, ಹುಟ್ಟಿನಿಂದಲೇಜಗಳವನ್ನು ಸೆರಗಿನಲ್ಲಿಟ್ಟುಕೊಂಡು ಬಂದಿರುವ ಜನತಾ ಪರಿವಾರದ ಕುಡಿ ಜಾತ್ಯತೀತ ಜನತಾದಳವೆಂಬ ಕುಲುಮೆಯಲ್ಲಿ ಭಿನ್ನಮತ ಕುದಿಯುತ್ತಿದೆ.  ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಬಿಜೆಪ ಎದುರಿಸುತ್ತಿರುವ ಈ ಸಂದಿಗ್ಧದ... Read More
ಸಾಧನೆಗೆ ಆದರ್ಶ ವ್ಯಕ್ತಿಗಳೇ ಪ್ರೇರಣೆ ಅಂಕಣ 

ಸಾಧನೆಗೆ ಆದರ್ಶ ವ್ಯಕ್ತಿಗಳೇ ಪ್ರೇರಣೆ

ಅಶ್ವಿನಿ ಅಂಗಡಿ ಅಂಕಣ ಬೆಳಕು-ಬೆರಗು Ashwini.angadi0@gmail.com ದೂರವಾಣಿ: 080-28535559   ಬಾಲ್ಯದಿಂದ ಒಂದು ಕನಸನ್ನು ಕಂಡು ಮತ್ತು ಎಳೇ ವಯಸ್ಸಿನಲ್ಲಿಯೇ ಅದನ್ನು ಸಾಕಾರ ಮಾಡಿಕೊಳ್ಳುವ ಪ್ರಯತ್ನ ಮಾಡಿ ಒಂದು ಹಂತಕ್ಕೆ ನನಸು ಮಾಡಿಕೊಂಡ ಅನೇಕ ಸಾಧಕರನ್ನು ನಾವು ಗಮನಿಸುತ್ತೇವೆ. ವಿಜ್ಞಾನಿ ಆಗಲು ಬಯಸುವವರು ತಮ್ಮ ಶಾಲಾ ಪಠ್ಯಕ್ರಮಗಳಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟು ಡಿಗ್ರಿಗಳಲ್ಲಿ ಅವರ ಕನಸಿನ ವಿಷಯವನ್ನೇ ತಗೆದುಕೊಂಡು ಹೆಚ್ಚು ಅಧ್ಯಯನ ಮಾಡಿ ಅದರಲ್ಲೇ ಸಾಧನೆ ಮಾಡುತ್ತಾರೆ. ಒಬ್ಬ ಸಂಗೀತಗಾರನಾಗಬೇಕಾಗಿದ್ದರೂ ಅಷ್ಟೇ ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿ ದೊಡ್ಡ ಕಲೆಗಾರ ಎನಿಸಿಕೊಳ್ಳುತ್ತಾನೆ. ಒಬ್ಬೊಬ್ಬ ಸಾಧಕನೂ... Read More
ಶ್ರೀ ಶ್ರೀ ರವಿಶಂಕರ್ ಗುರೂಜಿ ಹೊಸ ಅಂಕಣ ಅಂಕಣ 

ಶ್ರೀ ಶ್ರೀ ರವಿಶಂಕರ್ ಗುರೂಜಿ ಹೊಸ ಅಂಕಣ

ಶ್ರೀ ಶ್ರೀ ರವಿಶಂಕರ್ ಜೀವನ ದರ್ಶಿನಿ ಮಾನವ ದೇಹವು ಬಹಳ ಅಮೂಲ್ಯವಾದದ್ದು. ದಿನನಿತ್ಯದ ಜೀವನದಲ್ಲಿ ಕೆಲಸವನ್ನು ಮಾಡುತ್ತಿರುವಾಗ ಶಕ್ತಿಯನ್ನು ಕಳೆದುಕೊಳ್ಳುತ್ತೀರಿ. ಶಕ್ತಿಯು ಕೆಳಮಟ್ಟಕ್ಕಿಳಿದಾಗ ಮನಸ್ಸೂ ಇಳಿಮುಖವಾಗುತ್ತದೆ. ಇದನ್ನು ಅನುಭವಿಸಿದ್ದೀರೆ ? ಬಹಳಷ್ಟು ಸಲ, ’ನನ್ನ ಮನಸ್ಸೇಕೆ ಕೆಳಗುಂದುತ್ತಿದೆ ?’ ’ಯಾವುದೂ ಆಸಕ್ತಕರವಾಗಿ ಕಾಣುತ್ತಿಲ್ಲ, ನನಗೆ ಬಹಳ ಖಿನ್ನತೆಯ ಅನುಭವಾಗುತ್ತಿದೆ’ ಎಂದುಕೊಳ್ಳುತ್ತೀರಿ. ಮನಸ್ಸು ಇಳಿಮುಖವಾಗಿರುವುದನ್ನು ಸ್ಪಷ್ಟವಾಗಿ ಅನುಭವಿಸುತ್ತೀರಿ. ಇದಕ್ಕೆ ಹಲವಾರು ಕಾರಣಗಳಿವೆ : 1) ಕಾಲ – ಎಲ್ಲರ ಜೀವನ ಚಕ್ರದಲ್ಲೂ ಒಂದು ನಿರ್ದಿಷ್ಟವಾದ ಕಾಲ ಬರುತ್ತದೆ. ಆಗ ವಿನಾಕಾರಣ ಮನಸ್ಸಿನ ಶಕ್ತಿ ಕುಂದುತ್ತದೆ. 2)... Read More
ಸೆಗಣಿ ದುಂಬಿಯ ಜಿಪಿಎಸ್ ಹಾಲುಹಾದಿಯೇ? ಅಂಕಣ 

ಸೆಗಣಿ ದುಂಬಿಯ ಜಿಪಿಎಸ್ ಹಾಲುಹಾದಿಯೇ?

ವಿಜ್ಞಾನ ವೈವಿಧ್ಯ ಕೊಳ್ಳೇಗಾಲ ಶರ್ಮ ಅಂಕಣ ಇಮೇಲ್: kollegala@gmail.com, ದೂರವಾಣಿ: 9886640328 ಚಿಕ್ಕಂದಿನಲ್ಲಿ ನಮ್ಮ ಸಮ್ಮರ್ ಕ್ಯಾಂಪುಗಳೆಲ್ಲ ಊರಿನ ರಸ್ತೆಬದಿಯಲ್ಲೇ ಆಗುತ್ತಿದ್ದುವು. ಹುಲ್ಲಿನಲ್ಲಿ ಮರೆಮಾಚಿಕೊಂಡಿದ್ದ ಹಸಿರು ಕೀಟಗಳನ್ನು ಹೆಕ್ಕಿ ಬೆಂಕಿಪೆಟ್ಟಿಗೆಯಲ್ಲಿ ಕೂಡಿಡುವುದು. ಓತಿಕ್ಯಾತದ ಬೆನ್ನು ಹತ್ತಿ ಅದರ ಗೋಣಾಟಕ್ಕೆ ತಕ್ಕಂತೆ ನಮ್ಮ ತಲೆಯನ್ನೂ ಆಡಿಸಿ ಗೋಳು ಹೊಯ್ದುಕೊಳ್ಳುವುದು. ಹೆಲಿಕಾಪ್ಟರ್ ಚಿಟ್ಟೆಯ ಬಾಲಕ್ಕೆ ದಾರ ಕಟ್ಟಿ ಯಾರ ಚಿಟ್ಟೆ ಹೆಚ್ಚು ಮೇಲೆ ಹಾರುತ್ತದೆ ಎಂದು ಸ್ಪರ್ಧಿಸುವುದು. ಹಾಗೆಯೇ ರಸ್ತೆಬದಿಯಲ್ಲಿ ಸಗಣಿಯನ್ನು ಗೋಲಿಯಂತೆ ಉಂಡೆ ಮಾಡಿ ದೂಡುತ್ತಾ ಸಾಗುವ ದುಂಬಿಗಳನ್ನು ಹಿಡಿದು, ಯಾರ ದುಂಬಿ ಸಗಣಿಯುಂಡೆಯನ್ನು ಬಲು... Read More
ಬಿಸಿಲ ಬೇಗುದಿಗೆ ಪರಿತಪಿಸುತ್ತಿರುವ ಜನ! ಅಂಕಣ 

ಬಿಸಿಲ ಬೇಗುದಿಗೆ ಪರಿತಪಿಸುತ್ತಿರುವ ಜನ!

ಮಂಜುನಾಥ ಉಲುವತ್ತಿ ಶೆಟ್ಟರ್  ಸ.ಪ್ರಾಧ್ಯಾಪಕ. mulavathi@gmail.com /8105020759 ಈ ವರ್ಷ ರಾಜ್ಯದ 27 ಜಿಲ್ಲೆಗಳಲ್ಲಿ ಅಂದರೆ 170 ತಾಲೂಕುಗಳಲ್ಲಿ ಬರಗಾಲ ಅವರಿಸಿದೆ. ಅಂದರೆ ಕರ್ನಾಟಕದ ಅಂದಾಜು ಶೇ.90 ರಷ್ಟು ಬರಗಾಲ ಪೀಡಿತವಾಗಿದೆ. ಈ ಬರದ ತೀವ್ರತೆಯು ಮಹಾರಾಷ್ಟ್ರದ ಲಾತೂರ್, ಮರಾಠವಾಡಗಳಲ್ಲಿನ ನೀರಿನ ಸಮಸ್ಯೆಯನ್ನು ಗಮನಿಸಿದರೆ ದೈನಂದಿನ ಬದುಕು ಬರ್ಭರವೆನಿಸುತ್ತದೆ. ಈಗ ಅಲ್ಲಿನ ಜನರು ತಮ್ಮ ದುಡಿಮೆಯ ಅರ್ದದಷ್ಟು ಹಣವನ್ನು ನೀರಿಗಾಗಿ ವ್ಯಯಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕೆಲ ತೆರೆದ ಬಾವಿಗಳಲ್ಲಿ ಅಂತರ್ಜಲ ತಳ ಕಂಡ ಈ ಸಮಯದಲ್ಲಿ ಮಹಿಳೆಯರು ಜೀವ ಭಯ ಪಕ್ಕಕ್ಕಿರಿಸಿ ಹಗ್ಗದ ಮೂಲಕ ಬಾವಿಗೆ ಇಳಿಯುವ... Read More
ಕಣ್ಣಿಲ್ಲದಿದ್ದರೇನಂತೆ, ಪೋಷಕರೇ ನನ್ನ ಕಣ್ಣುಗಳು ಅಂಕಣ 

ಕಣ್ಣಿಲ್ಲದಿದ್ದರೇನಂತೆ, ಪೋಷಕರೇ ನನ್ನ ಕಣ್ಣುಗಳು

ಅಶ್ವಿನಿ ಅಂಗಡಿ ಅಂಕಣ ಬೆಳಕು-ಬೆರಗು Ashwini.angadi0@gmail.com ದೂರವಾಣಿ: 080-28535559     ಅದೊಂದು ಮಂಗಳವಾರ ರಾತ್ರಿ ಸುಮಾರು ಹನ್ನೆರಡೂವರೆ ಗಂಟೆ ಸಮಯ. ನಿದ್ರಾವಸ್ಥೆಗೆ ತೆರಳಿದ್ದ ಸುಮಾರು ೨೦ ಮಂದಿ ಸದಸ್ಯರಿರುವ ಕುಟುಂಬ ನಿಶ್ಯಬ್ಧವಾಗಿ ಮಲಗಿತ್ತು. ಅಳುವ ಮಗುವಿನ ಶಬ್ಧವನ್ನಾಲಿಸಿದ ಕೆಲವು ಸದಸ್ಯರು, ನವಮಾಸಗಳು ತುಂಬಿದ್ದ ಶಿಶುವಿನ ಎದುರು ನೋಡುತ್ತಿದ್ದ ತುಂಬು ಗರ್ಭಿಣಿಯ ನೆನಪಾಗಿ, ಹೊರಗಡೆ ಇದ್ದ ಜಗಲಿಯ ಕಡೆಗೆ ಧಾವಿಸಿದರು. ಸದ್ಯೋಜಾತ ಹೆಣ್ಣು ಮಗುವನ್ನು ಕಂಡು ಆ ಸಂದರ್ಭವನ್ನು ಸಂಭ್ರಮಿಸಿದರು. ವಿದ್ಯುತ್ ಸೌಲಭ್ಯವಿಲ್ಲದ ಆ ಹಳ್ಳಿಯಲ್ಲಿ, ನಾಲ್ಕು ಮೇಣದ ದೀಪಗಳನ್ನು ಹಿಡಿದು, ಮಗುವಿನ ಆರೈಕೆ... Read More
ಚಿಟಿಕೆ ಬೂಸ್ಟು ದುಬಾರಿ ಬೆಲೆ ಪಡೆದ ಕತೆ ಅಂಕಣ 

ಚಿಟಿಕೆ ಬೂಸ್ಟು ದುಬಾರಿ ಬೆಲೆ ಪಡೆದ ಕತೆ

ಕೊಳ್ಳೇಗಾಲ ಶರ್ಮ ಅಂಕಣ ವಿಜ್ಞಾನ ವೈವಿಧ್ಯ ಇಮೇಲ್: kollegala@gmail.com, ದೂರವಾಣಿ: 9886640328   ಮಾರ್ಚ್ 1, 2017. ಲಂಡನ್ನಿನ ಬಾನ್ಹಾಮ್ ಹರಾಜುದಾರರ ಕಛೇರಿಯಲ್ಲಿ ಒಂದು ವಿಶಿಷ್ಟ ಹರಾಜು. ಸುಮಾರು  90 ವರ್ಷ ಹಳೆಯ ಬೂಸ್ಟನ್ನು ಕಂಪೆನಿ ಹರಾಜಿಗಿಟ್ಟಿತ್ತು. ಚಿಟಿಕೆ ಪ್ರಮಾಣದ ಬೂಸ್ಟನ್ನು ಯಾರೋ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು 14617 ಅಮೆರಿಕನ್ ಡಾಲರುಗಳನ್ನು ಕೊಟ್ಟು ಖರೀದಿಸಿದರು. ಇಂದಿನ ದರದಲ್ಲಿ ಸುಮಾರು ಒಂಭತ್ತು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚು ಬೆಲೆ. ಬೂಸ್ಟಿಗಿಸ್ಟು ಬೆಲೆಯೇ? ಅಂದ ಹಾಗೆ ಬಾನ್ಹಾಮ್ ಕಂಪೆನಿ ಮಾರಿದ್ದು ಸಾಧಾರಣ ಬೂಸ್ಟಲ್ಲ. ಮಾನವನ, ವಿಜ್ಞಾನದ ... Read More
ಸಿಂಧುತಾಯ್‍ ಆಶ್ರಯದಲ್ಲಿ ಯಾರೂ ಅನಾಥರಲ್ಲ ಅಂಕಣ 

ಸಿಂಧುತಾಯ್‍ ಆಶ್ರಯದಲ್ಲಿ ಯಾರೂ ಅನಾಥರಲ್ಲ

ಅಶ್ವಿನಿ ಅಂಗಡಿ ಅಂಕಣ ಬೆಳಕು-ಬೆರಗು Ashwini.angadi0@gmail.com ದೂರವಾಣಿ: 080-28535559       ಅವಳ ಹೆಸರು ಸಿಂಧುತಾಯ್‍ ಸಪ್ಕಲ್‍ ಮಹಾರಾಷ್ಟ್ರದ ಪಿಂಪ್ರಿ (Pimpri) ಎಂಬ ಗ್ರಾಮದಲ್ಲಿ ರೈತರ-ಬಡ ಕುಟುಂಬದಲ್ಲಿ ಸಾಮಾನ್ಯವಾಗಿ ಯಾರಿಗೂ ಬೇಡದ ಮಗುವಾಗಿ ಜನ್ಮ ತಾಳಿದ ಆಕೆ ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿಕೊಳ್ಳುವ ಹಾಗೂ ಅದಕ್ಕಾಗಿ ದುಡಿಯುವ ಸಲುವಾಗಿ ತನ್ನ ವಿದ್ಯಾಬ್ಯಾಸವನ್ನು ಬಾಲ್ಯದಲ್ಲಿಯೇ ಮೊಟಕು ಗೊಳಿಸಿದರು. ನಾಲ್ಕನೇ ತರಗತಿಯಲ್ಲಿಯೇ ವಿದಾಯ ಹೇಳುವುದರ ಮೂಲಕ ಶಿಕ್ಷಣವನ್ನೇ ತ್ಯಾಆಗ ಮಾಡಿದಳು. ತನ್ನ 10ನೇ ವಯಸ್ಸಿನಲ್ಲಿಯೇ 30ರ ಹರೆಯದ ಶ್ರೀಹರಿ ಎಂಬ ವ್ಯಕ್ತಿಯೊಂದಿಗೆ ವೈವಾಹಿಕ ಬದುಕಿಗೆ... Read More
ರಕ್ಷಣಾ: ಲಂಚ ಪಡೆದವರ ವಿರುದ್ಧ ಹೆಚ್ಚುತ್ತಿರುವ ಸಾಕ್ಷಿ ಅಂಕಣ 

ರಕ್ಷಣಾ: ಲಂಚ ಪಡೆದವರ ವಿರುದ್ಧ ಹೆಚ್ಚುತ್ತಿರುವ ಸಾಕ್ಷಿ

ಅರಕಲಗೂಡು ಸೂರ್ಯಪ್ರಕಾಶ್ ಇಟಲಿಯ ವೈಮಾಂತರಿಕ್ಷ ಸಂಸ್ಥೆ ಫಿನ್‌ಮೆಕಾನಿಕಾದ ಇಬ್ಬರು ಹಿರಿಯ ಅಧಿಕಾರಿಗಳನ್ನು ಸುಮಾರು ೩೬೦೦ ರೂ.ಗಳ ಮೌಲ್ಯದ ಆಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ವ್ಯವಹಾರದಲ್ಲಿ ತಪ್ಪು ಲೆಕ್ಕಪತ್ರ ಮತ್ತು ಭ್ರಷ್ಟಾಚಾರಕ್ಕಾಗಿ ಮಿಲನ್‌ನ ನ್ಯಾಯಾಲಯ ಜೈಲಿಗೆ ಕಳುಹಿಸಿದೆ. ಈ ವ್ಯವಹಾರ ಪಡೆದುಕೊಳ್ಳಲು ಸಂಸ್ಥೆ ೩೦೦ ಲಕ್ಷ ಯೂರೊಗಳನ್ನು ಭಾರತೀಯರಿಗೆ ಲಂಚವಾಗಿ ನೀಡಲಾಗಿತ್ತೆಂದು ಈಗ ತಿಳಿದುಬಂದಿದೆ. ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಭಾರತಕ್ಕೆ ಹೊಸದೇನೂ ಅಲ್ಲ. ಆದರೆ ವಿಶೇಷ ಕಾರಣದಿಂದ ಆಗಸ್ಟಾವೆಸ್ಟ್‌ಲ್ಯಾಂಡ್ ಲಂಚ ಪ್ರಕರಣ ಪ್ರತ್ಯೇಕವಾಗಿ ನಿಲ್ಲುತ್ತದೆ. ಹೇಗೆಂದರೆ ಲಂಚ ನೀಡಿದವರನ್ನು ಇಟಲಿಯ ನ್ಯಾಯಾಲಯ ಈಗಾಗಲೇ ಜೈಲಿಗೆ ತಳ್ಳಿದೆ. ಆದರೆ ಭಾರತೀಯ... Read More
ಹನಿ ಟ್ರ್ಯಾಪ್‌ಗಿಂತ ಅಪಾಯಕಾರಿ ಹುಲಿ ಅಂಕಣ 

ಹನಿ ಟ್ರ್ಯಾಪ್‌ಗಿಂತ ಅಪಾಯಕಾರಿ ಹುಲಿ

ಜೋಸೆಫ್  ಹೂವರ್ ರಾಜ್ಯದಲ್ಲಿ ಹುಲಿ ಮತ್ತು ಮಾನವ ಸಂಘರ್ಷಕ್ಕೆ ಮತ್ತೆ ಹಲವಾರು ಬಲಿಯಾಗಿವೆ. ಇಬ್ಬರು ನಾಗರಿಕರು ಹಾಗೂ ಒಂದು ಹುಲಿ ಈ ಕಾದಾಟದಲ್ಲಿ ಬಲಿಯಾಗಿದೆ. ಕಾರ್ಯಾಚರಣೆ ವೇಳೆ ಹುಲಿಯೊಂದು ಎರಗಿ ದಾಳಿ ನಡೆಸಿದ ಪರಿಣಾಮ ಅರಣ್ಯ ವಾಚರ್ ಶಿವಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾನೆ. ಈತನ ಸ್ಥಿತಿ ಚಿಂತಾಜನಕವಾಗಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ವಾಸ್ತವಾಗಿ ಈ ಎಲ್ಲ ಪ್ರಸಂಗವನ್ನು ತಪ್ಪಿಸಬಹುದಿತ್ತು. ಒಂದು ವೇಳೆ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೆ…. ರೆ….. ಕಳೆದ ವರ್ಷ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದ ನಂತರ ನೀಡಿದ ವರದಿಯ... Read More