You are here
41,850 ಕಾರುಗಳ ಏರ್‍ ಬ್ಯಾಗ್‍ ಬದಲಿಗೆ ಹೋಂಡಾ ಆಟೋ/ಇ-ಟೆಕ್ 

41,850 ಕಾರುಗಳ ಏರ್‍ ಬ್ಯಾಗ್‍ ಬದಲಿಗೆ ಹೋಂಡಾ

ಚೆನ್ನೈ: ಭಾರತದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ 41,580 ಕಾರುಗಳಲ್ಲಿ ದೋಷ ಕಂಡು ಬಂದಿದ್ದ ಏರ್‍ ಬ್ಯಾಗ್‍ಗಳನ್ನು ಬದಲಿ ವ್ಯವಸ್ಥೆ ಮಾಡಿಕೊಡಲು ಹೋಂಡಾ ಸಂಸ್ಥೆ ನಿರ್ಧರಿಸಿದೆ. ಹೋಂಡಾ ಕಾರ್ಸ್‍ ಇಂಡಿಯಾ ಲಿಮಿಟೆಡ್‍ ಸಂಸ್ಥೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಸ್ಥೆಯ ಜಾಸ್‍, ಸಿಟಿ, ಸಿವಿಕ್‍ ಮತ್ತು ಅಕಾರ್ಡ್‍ ಕಾರುಗಳ ಮುಂದಿನ ಸೀಟುಗಳ ಏರ್‍ ಬ್ಯಾಗ್‍ಗಳಲ್ಲಿ ದೋಷ ಕಂಡು ಬಂದಿದ್ದು, ಅವುಗಳಿಗೆ ಯಾವುದೇ ಶುಲ್ಕ ವಿಧಿಸದೇ ಹೊಸ ಏರ್‍ ಬ್ಯಾಗ್‍ ಅಳವಡಿಸಿಕೊಡುವುದಾಗಿ ತಿಳಿಸಿದೆ. 2012ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ 7265 ಜಾಸ್‍ ಕಾರುಗಳು, ಸೆಡಾನ್ ಸಿಟಿಯ 32,456 ಮತ್ತು... Read More
ಯಮಹಾ 249ಸಿಸಿ ಎಫ್‍ಜೆಡ್‍25 ಬೈಕ್‍ ಬಿಡುಗಡೆ ಆಟೋ/ಇ-ಟೆಕ್ 

ಯಮಹಾ 249ಸಿಸಿ ಎಫ್‍ಜೆಡ್‍25 ಬೈಕ್‍ ಬಿಡುಗಡೆ

ಯುವಕರನ್ನು ಆಕರ್ಷಿಸುವ ಭಿನ್ನ ವಿನ್ಯಾಸದೊಂದಿಗೆ ನಿರ್ಮಿಸಲಾಗಿರುವ 250 ಸಿಸಿಯ ಎಫ್‍ಜೆಡ್‍ 25 ಬೈಕ್‍ ಅನ್ನು ಯಮಹಾ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇಂಡೋನೇಷ್ಯಾದ ಎಂ-ಸ್ಲಾಜ್‍ ಮಾದರಿಯನ್ನು ಹೋಲುವ ಎಫ್‍ಜೆಡ್‍2 ಸ್ಪೋರ್ಟ್ಸ್‍ ಬೈಕ್ ವಿನ್ಯಾಸ ಭಾರತೀಯರಿಗೆ ಹೊಸ ಪರಿಚಯವಾಗಿದೆ. ಯಮಹಾ ಆರ್‍15ವಿ2.0 ಮತ್ತು ವೈಜೆಡ್‍ಎಫ್‍—ಆರ್‍3 ಅಂತರ ಕಡಿಮೆ ಮಾಡುವ ಉದ್ದೇಶದಿಂದ ಈ ಬೈಕ್‍ ಪರಿಚಯಿಸಿದೆ. ಇದು ಈ ಸರಣಿಯ ಯಮಹಾ ಬೈಕ್‍ಗಳಲ್ಲೇ ಅತ್ಯಂತ ಪವರ್‍ ಫುಲ್‍ ಬೈಕ್‍ ಎಂದು ಸಂಸ್ಥೆ ಹೇಳಿಕೊಂಡಿದೆ. Read More
ಮಾರುತಿಯ ಹೊಸ `ಇಗ್ನಿಸ್‍’ ಕಾರು ಮಾರುಕಟ್ಟೆಗೆ ಆಟೋ/ಇ-ಟೆಕ್ 

ಮಾರುತಿಯ ಹೊಸ `ಇಗ್ನಿಸ್‍’ ಕಾರು ಮಾರುಕಟ್ಟೆಗೆ

ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಾರುತಿ ಸುಜುಕಿ ಸಂಸ್ಥೆ (ಎಂಎಸ್‍ಐಎಲ್) `ನೆಕ್ಸಾ’ ಅವತರಣಿಕೆಯ ಮೂರನೇ ಮಾದರಿಯ ಕಾರು `ಇಗ್ನಿಸ್‍’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ 4.59 ಲಕ್ಷದಿಂದ 7.80 ಲಕ್ಷದವರಿಗಿದೆ. ಸಣ್ಣ ಕಾರುಗಳ ಮಾರುಕಟ್ಟೆಯಲ್ಲಿ ನೆಕ್ಸಾ ಮಾರುತಿ ಸುಜುಕಿ ಸಂಸ್ಥೆಯ ಒಟ್ಟಾರೆ ಮಾರಾಟದಲ್ಲಿ ಶೇ.10ರಷ್ಟು ಪಾಲು ಹೊಂದಿದೆ. ಇದನ್ನು ಶೇ. 15ರಿಂದ 17ರಷ್ಟು ಹೆಚ್ಚಿಸುವ ಗುರಿ ಹೊಂದಿದೆ. ಯುವ ಸಮುದಾಯ ಆಕರ್ಷಿಸುವ ವಿನ್ಯಾಸ ಅಲ್ಲದೇ ಆಂಡ್ರಾಯ್ಡ್‍ ಮೊಬೈಲ್‍ ಹಾಗೂ ಆಪಲ್‍ ಕಾರ್‍ ಪ್ಲೇ ಮೂಲಕ ಚಾಲನೆ ಮಾಡಬಹುದಾದ ಹೊಸ... Read More
ಭಾರತಕ್ಕೆ ಬಂದ ಮರ್ಸಿಡೆಸ್  ಕಾರು! ಆಟೋ/ಇ-ಟೆಕ್ 

ಭಾರತಕ್ಕೆ ಬಂದ ಮರ್ಸಿಡೆಸ್  ಕಾರು!

ಮರ್ಸಿಡೆಸ್ ಎಎಂಜಿ ಸಿ43 ಕಾರು ಕೊನೆಗೂ ಭಾರತಕ್ಕೆ ಕಾಲಿಟ್ಟಿದೆ. ಭಾರತದಲ್ಲಿ ತನ್ನ ಉದ್ಯಮ ಹೆಚ್ಚಿಸಿಕೊಳ್ಳುವ ಮರ್ಸಿಡೆಸ್ ಕಂಪನಿಯ ಉದ್ದೇಶ ಈ ಕಾರಿನ ಮೂಲಕ ಈಡೇರುವ ವಿಶ್ವಾಸವನ್ನು ಸಂಸ್ಥೆ ಹೊಂದಿದೆ. ಸಿ43 ಕಾರಿನ ಮಾದರಿ ಭಾರತದಲ್ಲಿ ಮರ್ಸಿಡೆಸ್ ಬಿಡುಗಡೆ ಮಾಡಿದ 13ನೇ ಶ್ರೇಣಿಯದ್ದಾಗಿದೆ, ಆರಂಭದಲ್ಲಿ ಕೇವಲ 12 ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಇದರ ಆರಂಭಿಕ ಬೆಲೆ 74.35 ಲಕ್ಷ ಆಗಿದ್ದು, ರೋಡಿಗಿಳಿಯುವ ವೇಳೆಗೆ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ Read More
ಜಿಯೋನಿ ಪಯೋನಿರ್ ಪಿ7 ಮೊಬೈಲ್ ಬಿಡುಗಡೆ ಆಟೋ/ಇ-ಟೆಕ್ 

ಜಿಯೋನಿ ಪಯೋನಿರ್ ಪಿ7 ಮೊಬೈಲ್ ಬಿಡುಗಡೆ

ಜಿಯೋನಿ ಸಂಸ್ಥೆ ಪಯೋನಿಯರ್ ಪಿ7 ಶ್ರೇಣಿಯ ಮೊಬೈಲ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 5 ಇಂಚಿನ ಎಚ್ಡಿಎಪಿಎಸ್ ಡಿಸ್ಪ್ಲೇ 4ಜಿ ಮತ್ತು ಸಿಡಿಎಂಎ ಸ್ಮಾಟರ್್ಫೋನ್ ಇದಾಗಿದ್ದು, ಗ್ರಾಹಕರ ಸ್ನೇಹಿಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಬಿಳಿ, ಗೋಲ್ಡ್ ಮತ್ತುಗ್ರೇ ಬಣ್ಣಗಳಲ್ಲಿ ಮೊಬೈಲ್ ಬಿಡುಗಡೆ ಮಾಡಲಾಗಿದ್ದು, ಆರಂಭಿಕ ಬೆಲೆ 9,999 ರೂ, ಆಗಿದೆ, ಮೊಬೈಲ್ ವಿಶೇಷತೆಗಳು ಸ್ಕ್ರೀನ್ ಟೈಪ್-12.7 ಸೆ.ಮೀ. (5.0) ಎಚ್ ಡಿ, ಐಪಿಎಸ್ ಸೋಡಾ ಕೆಪಾಸಿಟಿವ್ ಸಿಪಿಯು 1.3 ಮೆಗಾ ಹಡ್ಸರ್್ ಕ್ವಾಡ್ ಕೋರ್ ಮೆಮೋರಿ- 2 ಜಬಿ ರ್ಯಾಮ್, 16 ಜಿಬಿ ಮತ್ತು 128... Read More
2000 ನೋಟಿನಲ್ಲೇ ಲಕ್ಷ ಲಕ್ಷ ಲಂಚ: ಮೂವರ ಸೆರೆ ಆಟೋ/ಇ-ಟೆಕ್ 

2000 ನೋಟಿನಲ್ಲೇ ಲಕ್ಷ ಲಕ್ಷ ಲಂಚ: ಮೂವರ ಸೆರೆ

ಅಹಮದಾಬಾದ್: ಕಪ್ಪು ಹಣ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ದೊಡ್ಡ ನೋಟುಗಳನ್ನು ರದ್ದು ಮಾಡಿ ಹೋರಾಟ ನಡೆಸುತ್ತಿರುವ ಬೆನ್ನಲ್ಲೆ. ಹೊಸ ನೋಟುಗಳಲ್ಲೇ ನಡೆದಿರುವ ಮೊದಲ ಲಂಚಾವತಾರದ ಪ್ರಕರಣ ಬಹಿರಂಗವಾಗಿದೆ.     ಸಾರ್ವಜನಿಕ ಸ್ವಾಮ್ಯದ ಗುಜರಾತ್‌ನ ಕಾಂಡ್ಲಾ ಪೋರ್ಟ್ ಟ್ರಸ್ಟ್‌ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಹೊಸ 2000 ರೂ ನೋಟುಗಳಲ್ಲಿ  ಲಂಚ ಪಡೆಯುತ್ತಿದ್ದ ಇಬ್ಬರು ಸಿಬ್ಬಂದಿಯನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಬಂಧಿತರಿಂದ 2000 ರೂಪಾಯಿಯ ಒಟ್ಟು 145 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಹೊಸ ನೋಟುಗಳಲ್ಲಿ 2.9 ಲಕ್ಷ ಲಂಚ ಪಡೆಯಲಾಗಿತ್ತು.ಬಿಲ್ ಪಾವತಿಗಾಗಿ... Read More