You are here
ಕ್ಷೇತ್ರದ ಅಭಿವೃದ್ಧಿಯೇ ನಮ್ಮಮುಖ್ಯ ಗುರಿ: ಶಾಸಕ ಮುನಿರತ್ನ ನಮ್ ಏರಿಯಾ ಸುದ್ದಿ 

ಕ್ಷೇತ್ರದ ಅಭಿವೃದ್ಧಿಯೇ ನಮ್ಮಮುಖ್ಯ ಗುರಿ: ಶಾಸಕ ಮುನಿರತ್ನ

ಬೆಂಗಳೂರು: ತ್ವರಿತ ಗತಿಯಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕ್ಷೇತ್ರದಲ್ಲಿ ಸೌಕರ್ಯ ಅಭಿವೃದ್ಧಿಗೆ ಹೆಚ್ಚುಒತ್ತು ನೀಡುವುದೇ ನಮ್ಮ ಗುರಿ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮನಿರತ್ನ ತಿಳಿಸಿದ್ದಾರೆ. ಅವರು ವಾರ್ಡ್ ಸಂಖ್ಯೆ 73ರ ಕೊಟ್ಟಿಗೆಪಾಳ್ಯ  ಹಾಗೂ ನರಸಿಂಹನಪಾಳ್ಯ, ಸುಮ್ಮನಹಳ್ಳಿಯಲ್ಲಿ ಕಾಂಕ್ರೀಟ್‍ ರಸ್ತೆಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು. ಕ್ಷೇತ್ರದಲ್ಲಿ ಈಗ  ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ಸಾಗುತ್ತಿವೆ. ನಾಗರಿಕರಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ನೀಡಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುನಿರತ್ನ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಪೊರೇಟರ್‍ ಜಿ. ಮೋಹನ್‍ ಕುಮಾರ್, ವಾರ್ಡ್... Read More
ಗುರುಗಳು ಸದಾ ಪ್ರಾತಃ ಸ್ಮರಣೀಯರು: ಶಾಸಕ ಮುನಿರತ್ನ ನಮ್ ಏರಿಯಾ ಸುದ್ದಿ 

ಗುರುಗಳು ಸದಾ ಪ್ರಾತಃ ಸ್ಮರಣೀಯರು: ಶಾಸಕ ಮುನಿರತ್ನ

ಬೆಂಗಳೂರು: ಪೂಜ್ಯ ಗುರುಗಳು ಹಾಗೂ ಗುರು ಸ್ಥಾನದಲ್ಲಿರುವ ಎಲ್ಲರನ್ನೂ ನಾವು ಸದಾ ಸ್ಮರಿಸಬೇಕಾಗಿದೆ. ನಮ್ಮ ಏಳಿಗೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವು ನೀಡುವವರನ್ನೂ ನಾವು ನೆನೆಸಿಕೊಳ್ಳಬೇಕು ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ತಿಳಿಸಿದ್ದಾರೆ. ಗುರುಪೂರ್ಣಿಮೆ ಅಂಗವಾಗಿ ಲಗ್ಗೆರೆ ಶ್ರೀ ಶಿರಡಿ ಸಾಯಿಬಾಬಾ ದೇವಾಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಶಾಸಕರು ಮಾತನಾಡಿದರು. ಗುರುಭಕ್ತಿಯನ್ನು ನಾವು ಎಂದಿಗೂ ಆಚರಿಸಿಕೊಂಡು, ಪಾಲಿಸಿಕೊಂಡು ಬರಬೇಕು. ಯಾವುದೇ ಕಾರಣಕ್ಕೂ ನಮ್ಮ ಬೆನ್ನ ಹಿಂದೆ ನಿಂತು ಕಾಪಾಡುವವರನ್ನು ಸ್ಮರಿಸಬೇಕು ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ... Read More
ನಾಗರಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಪಣ: ಶಾಸಕ ಮುನಿರತ್ನ ಭರವಸೆ ನಮ್ ಏರಿಯಾ ಸುದ್ದಿ 

ನಾಗರಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಪಣ: ಶಾಸಕ ಮುನಿರತ್ನ ಭರವಸೆ

ಬೆಂಗಳೂರು: ನಾಗರಿಕರಿಗೆ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸುಲು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ದೊರೆಯುವ ಎಲ್ಲ ಅನುದಾನಗಳನ್ನು ಬಳಸಿಕೊಳ್ಳಲಾಗುವುದು ಎಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರ ವಾರ್ಡ್ 160ರಲ್ಲಿನ ಸಪ್ತಗಿರಿ ಲೇಔಟ್‍, ಚನ್ನಸಂದ್ರದ ಶಶಿಧರ್‍ ಬಡಾವಣೆಯಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಮುನಿರತ್ನ, ಈಗಾಗಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಅಭಿವೃದ್ಧಿ ಯೋಜನೆ ಕಾಮಗಾರಿಗಳ ಪರಿಶೀಲನೆಯನ್ನೂ ನಡೆಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಶಾಸಕರಿಗೆ ಅಹವಾಲು ಸಲ್ಲಿಸಿದರು. ಈ ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿದ ಶಾಸಕ... Read More
ರಸ್ತೆ ಡಾಂಬರೀಕರಣ ಕಾಮಗಾರಿ ಶೀಘ್ರ ಪೂರ್ಣ: ಸೋಮಶೇಖರ್‍ ನಮ್ ಏರಿಯಾ ಸುದ್ದಿ 

ರಸ್ತೆ ಡಾಂಬರೀಕರಣ ಕಾಮಗಾರಿ ಶೀಘ್ರ ಪೂರ್ಣ: ಸೋಮಶೇಖರ್‍

ಬೆಂಗಳೂರು: ಬಡಾವಣೆ ವ್ಯಾಪ್ತಿಯಲ್ಲಿರುವ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳನ್ನು ಅತಿ ಶೀಘ್ರದಲ್ಲಿಯೇ ಕೈಗೊಂಡು ಪೂರ್ಣಗೊಳಿಸಲಾಗುವುದು ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‍.ಟಿ. ಸೋಮಶೇಖರ್  ತಿಳಿಸಿದ್ದಾರೆ. ವಾಜರಹಳ್ಳಿಯಲ್ಲಿ ಹೈಮಾಸ್ಟ್ ಬೀದಿ ದೀಪಗಳ ಉದ್ಘಾಟನೆ ಹಾಗೂ ಶ್ರೀರಾಮ್‍ ಸುರಭಿ ಅಪಾರ್ಟ್ ಮೆಂಟ್‍ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಬೆಂಬಲವೂ ಸಿಕ್ಕಿದೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲರಿಗೂ ಪಾಲಿಕೆ ಸದಸ್ಯರಾದ ಆರ್ಯ ಶ್ರೀನಿವಾಸ್ ಧನ್ಯವಾದ ಅರ್ಪಿಸಿದರು.... Read More
ಮಳೆ ಅವಾಂತರ:ಮಧ್ಯರಾತ್ರಿ ಮರಗಳ ತೆರವುಗೊಳಿಸಿದ ಶಾಸಕ ದೇವರಾಜ್ ನಮ್ ಏರಿಯಾ ಸುದ್ದಿ 

ಮಳೆ ಅವಾಂತರ:ಮಧ್ಯರಾತ್ರಿ ಮರಗಳ ತೆರವುಗೊಳಿಸಿದ ಶಾಸಕ ದೇವರಾಜ್

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರ ಅದರಲ್ಲೂ ರಾತ್ರಿ ವೇಳೆ ಮಳೆಯಾಗುತ್ತಿರುವುದು ನಾಗರಿಕರನ್ನು ಸಂಕಷ್ಟಕ್ಕೀಡು ಮಾಡಿದೆ. ಗಾಳಿ ಮಳೆಯಿಂದಾಗಿ ಮರಗಳು ಉರುಳಿಬಿದ್ದು ರಸ್ತೆಯಲ್ಲಿ ಬಿದ್ದು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಆರ್‍.ವಿ. ದೇವರಾಜ್‍ ಮಧ್ಯರಾತ್ರಿಯಲ್ಲಿ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು. ಬೆಂಗಳೂರಿನ ಡಬಲ್‍ ರೋಡ್‍ನಲ್ಲಿ ಮಳೆಯಿಂದಾಗಿ ಮರಗಳು ಉರುಳಿ ಬಿದ್ದಿದ್ದವು. ರಿಚ್‍ಮಂಡ್‍ ವೃತ್ತದ ಫ್ಲೈ ಓವರ್ ‍ಹಾಗೂ ಪೂರ್ಣಿಮಾ ಚಿತ್ರಮಂದಿರದ ಬಳಿ ಮರಗಳು ಉರುಳಿಬಿದ್ದು ವಾಹನ ಚಲಿಸದೇ ಇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ... Read More
ಕುಡಿಯುವ ನೀರು, ಸ್ವಚ್ಚತೆಗೆ ಆದ್ಯತೆ: ಸುಜಾತಾ ರಮೇಶ್ ನಮ್ ಏರಿಯಾ ಸುದ್ದಿ 

ಕುಡಿಯುವ ನೀರು, ಸ್ವಚ್ಚತೆಗೆ ಆದ್ಯತೆ: ಸುಜಾತಾ ರಮೇಶ್

ಬೆಂಗಳೂರು: ನಾಗರಿಕರಿಗೆ ಅತಿ ಮುಖ್ಯವಾದ ಸೌಕರ್ಯ ಎಂದರೆ ನೀರು. ಅದನ್ನು ಪೂರೈಕೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕುಡಿಯುವ ನೀರು ಪೂರೈಕೆಯೇ ನಮ್ಮ ಮುಖ್ಯ ಗುರಿ ಎಂದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಆಜಾದ್ ‍ನಗರ ವಾರ್ಡ್ ನಂಬರ್ 141ರ ಪಾಲಿಕೆ ಸದಸ್ಯರಾದ ಸುಜಾತ ರಮೇಶ್‍ ತಿಳಿಸಿದ್ದಾರೆ. ರುದ್ರಪ್ಪ ಗಾರ್ಡನ್‍ನಲ್ಲಿ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಸುಜಾತಾ ರಮೇಶ್‍, ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ಈಗ ಮತ್ತೊಂದು ಘಟಕವನ್ನು ಪ್ರಾರಂಭಿಸಲಾಗಿದೆ ಎಂದರು.  ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು.... Read More
ಜನ ಪರ ಯೋಜನೆಗಳ ಮೂಲಕ ನುಡಿದಂತೆ ನಡೆದ ಸರ್ಕಾರ: ದೇವರಾಜ್‍ ನಮ್ ಏರಿಯಾ ಸುದ್ದಿ 

ಜನ ಪರ ಯೋಜನೆಗಳ ಮೂಲಕ ನುಡಿದಂತೆ ನಡೆದ ಸರ್ಕಾರ: ದೇವರಾಜ್‍

ಬೆಂಗಳೂರು: ರಾಜ್ಯ ಕಾಂಗ್ರೆಸ್‍ ಸರ್ಕಾ ರ ಈಗ ಯಶಸ್ವಿ ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷದತ್ತ ಹೆಜ್ಜೆ ಹಾಕಿದೆ. ಈ ಅವಧಿಯಲ್ಲಿ ಸಾಕಷ್ಟು ಭರವಸೆಗಳನ್ನು ಈಡೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಧರ್ಮರಾಯಸ್ವಾಮಿ ವಾರ್ಡ್ ನಲ್ಲಿ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ರಿಪೇರಿ ಹಾಗೂ ಬಹುಕೋಟಿ ವೆಚ್ಚದ ಪುನರುಜ್ಜೀವನ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.  ಈ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ... Read More
ಮಳೆ ನೀರು ಕಾಲುವೆ ನಿರ್ವಹಣೆ ಬಗ್ಗೆ ಆದ್ಯತೆ ನೀಡಲು ಸೂಚನೆ ನಮ್ ಏರಿಯಾ ಸುದ್ದಿ 

ಮಳೆ ನೀರು ಕಾಲುವೆ ನಿರ್ವಹಣೆ ಬಗ್ಗೆ ಆದ್ಯತೆ ನೀಡಲು ಸೂಚನೆ

ಬೆಂಗಳೂರು: ಮಳೆ ಬಂದ ನಂತರ ಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಒಳಚರಂಡಿ ಮೂಲಕ ನೀರು ಹಾದು ಹೋಗಲು ಈಗಾಗಲೇ ಹಲವಾರು ಕಾಮಗಾರಿಗಳನ್ನು ಆರಂಭಿಸಲಾಗಿದೆ. ಇನ್ನು ಕಸ ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ತಿಳಿಸಿದ್ದಾರೆ. ಗುರುವಾರ ಮುಂಜಾನೆಯೇ ಜೆಪಿ ಪಾರ್ಕ್‍ನಲ್ಲಿ ಕಸ ನಿರ್ವಹಣೆ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಂಟಿ ಆಯುಕ್ತರು ಶಾಸಕರೊಂದಿಗೆ ಪರಿಶೀಲನೆ ನಡೆಸಿದರು. ವಾರ್ಡ್‍ ನಂಬರ್ ‍17ರಲ್ಲಿ ಬಿಬಿಎಂಪಿ ವತಿಯಿಂದ ಕೈಗೊಳ್ಳಲಾಗುತ್ತಿರುವ ಸ್ವಚ್ಚತಾ ಯೋಜನಾ ಕಾಮಗಾರಿಗಳ ಬಗ್ಗೆ ಶಾಸಕರು ಹಾಗೂ... Read More
ಶಾಸಕರಾದ ಮುನಿರತ್ನ, ಅಶ್ವತ್ಥ ನಾರಾಯಣ ಜಂಟಿ ಪರಿಶೀಲನೆ ನಮ್ ಏರಿಯಾ ಸುದ್ದಿ 

ಶಾಸಕರಾದ ಮುನಿರತ್ನ, ಅಶ್ವತ್ಥ ನಾರಾಯಣ ಜಂಟಿ ಪರಿಶೀಲನೆ

ಬೆಂಗಳೂರು: ಕಸಮುಕ್ತ ಬಡಾವಣೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ತಿಳಿಸಿದರು. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣ ಅವರ ಜತೆ ಜಂಟಿಯಾಗಿ ಮತ್ತಿಕೆರೆಯಲ್ಲಿ ಪೂರ್ಣಪುರ ರೈಲ್ವೆ ಬ್ಯಾಕ್‍ ಗೇಟ್‍ ಸಮೀಪ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಹಾಗೂ ಆರ್‍ ಸಿಸಿ ಕೌಂಪೌಂಡ್‍ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ ನಂತರ ಮುನಿರತ್ನ ಮಾತನಾಡಿದರು. ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗುವುದರಿಂದ ಈ ಪ್ರದೇಶ ಕಸಮುಕ್ತವಾಗುವ ನಿರೀಕ್ಷೆ ಇದೆ ಎಂದು ಉಭಯ... Read More
ಮಳೆ ಬಂದರೂ ಕಾಮಗಾರಿಗಳು ಪ್ರಗತಿಯಲ್ಲಿ: ಮುನಿರತ್ನ ನಮ್ ಏರಿಯಾ ಸುದ್ದಿ 

ಮಳೆ ಬಂದರೂ ಕಾಮಗಾರಿಗಳು ಪ್ರಗತಿಯಲ್ಲಿ: ಮುನಿರತ್ನ

ಬೆಂಗಳೂರು: ಕ್ಷೇತ್ರದ ಕೆಲವೆಡೆ ನಡೆಯುತ್ತಿರುವ ಕಾಂಕ್ರೀಟ್‍ ಕಾಮಗಾರಿ ಹಾಗೂ ಡಾಂಬರೀಕರಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನಷ್ಟು ಕಾಮಗಾರಿಗಳು ಮುಂದಿನ ದಿನಗಳಲ್ಲಿ ಆರಂಭಗೊಳ್ಳುತ್ತಿವೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ತಿಳಿಸಿದರು. ಜ್ಞಾನ ಭಾರತಿ ವಾರ್ಡ್ 129ರ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆಯುತ್ತಿರುವ ಡಾಂಬರೀಕರಣ ಹಾಗೂ ಕಾಂಕ್ರೀಟ್‍ ರಸ್ತೆಯ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮುನಿರತ್ನ ಮಾತನಾಡಿದರು. ಈಗ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವೆಡೆ ಕಾಮಗಾರಿಗೆ ಅಡ್ಡಿಯಾಗಿದೆ. ಆದರೂ ನಿರಂತರವಾಗಿ ಕಾಮಗಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಹಾಗೂ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಆದರೂ ಕಾಮಗಾರಿಗಳ ಗುಣಮಟ್ಟದಲ್ಲಿ ಲೋಪ... Read More