You are here
ಉಪ್ಪಿ ಮಾಡಲಿದ್ದಾರಾ ಬಿಎಸ್‌ವೈ ಪಾತ್ರ? ಪ್ರಧಾನ ಸುದ್ದಿ 

ಉಪ್ಪಿ ಮಾಡಲಿದ್ದಾರಾ ಬಿಎಸ್‌ವೈ ಪಾತ್ರ?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಮತಕ್ಷೇತ್ರಗಳಲ್ಲಷ್ಟೇ ಅಲ್ಲ ಬೆಳ್ಳಿ ಪರದೆ ಮೇಲೆ ಸಹ ಅನಾವರಣಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೀವನ ಕುರಿತ ಭೂಮಿಪುತ್ರ ಚಿತ್ರ ನಿರ್ಮಾಣದ ಘೋಷಣೆಯ ಬೆನ್ನಿಗೆ ಬಿಜೆಪಿ ರಾಜ್ಯಾಧಕ್ಷ ಯಡಿಯೂರಪ್ಪ ಅವರ ಕುರಿತಾದ ಚಿತ್ರ ಮೂಡಿಬರುವ ಸೂಚನೆ ಲಭ್ಯವಾಗಿದೆ. ಖ್ಯಾತ ನಿರ್ದೇಶಕ ಎಂ.ಎಸ್ ರಮೇಶ್ ಅವರ ನಿರ್ದೇಶನದಲ್ಲಿ ಬಿಎಸ್ ವೈ ಅವರ ಚಿತ್ರ ಮೂಡಿ ಬರಲಿದೆ ಎಂದು ಮೂಲಗಳು ತಿಳಿಸಿವೆ, ಈ ಚಿತ್ರಕ್ಕೆ ನೇಗಿಲ ಯೋಗಿ ಹಾಗೂ ಮಣ್ಣಿನ ಮಗ ಎಂಬ ಟೈಟಲ್ ನೋಂದಾಣಿ ಮಾಡಲಾಗಿದ್ದು ಇದರಲ್ಲಿ ಯಾವುದು... Read More
ಪ್ರೀತಿಗಾಗಿ ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮತಾಂತರ ಪ್ರಧಾನ ಸುದ್ದಿ 

ಪ್ರೀತಿಗಾಗಿ ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮತಾಂತರ

ಯಲ್ಲಾಪುರ: ಪ್ರೀತಿಸಿದ ಯುವತಿಯನ್ನು ಮದುವೆಯಾಗುವ ಸಲುವಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಯಲ್ಲಾಪುರ ಪಟ್ಟಣ ನೂತನ ನಗರದ ಹಸನ್ ರಹೀಮ್ ಖಾನ್ ಎಂಬಾತ ನಾಲ್ಕು ವರ್ಷಗಳಿಂದ ಯಶೋದಾಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಮತಾಂತರ ಆದ ನಂತರ ರಾಹುಲ್ ಆರ್ಯ ಎಂದು ಹೆಸರು ಬದಲಾಯಿಸಿಕೊಂಡಿರುವ ಆತ, ಬುಧವಾರ ಇಲ್ಲಿನ ಈಶ್ವರ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಯಶೋದಾಳನ್ನು ಮದುವೆಯಾಗಿದ್ದಾನೆ. ಮದುವೆ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಭಜರಂಗದಳದ ಮಂಗೇಶ್ ಕೈಸರೆ ಮತ್ತು ಯಶೋದಾಳ ಪೋಷಕರು ಹಾಜರಿದ್ದರು. Read More
‌ಐಸಿಎಸ್‌ಇ: ರಾಜ್ಯದ ಅಶ್ವಿನ್ ಗೆ ಅಗ್ರಪಟ್ಟ ಪ್ರಧಾನ ಸುದ್ದಿ 

‌ಐಸಿಎಸ್‌ಇ: ರಾಜ್ಯದ ಅಶ್ವಿನ್ ಗೆ ಅಗ್ರಪಟ್ಟ

ಬೆಂಗಳೂರು: ಐಸಿಎಸ್ಇ ಮತ್ತು ಐಎಸ್ ಸಿ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 10 ಮತ್ತು 12ನೇ ತರಗತಿಯಲ್ಲಿ ಕ್ರಮವಾಗಿ ಶೇಕಡಾ 99.8 ಹಾಗೂ ಶೇಕಡಾ 99.04 ಅಂಕ ಗಳಿಸಿದ್ದಾರೆ. ಬೆಂಗಳೂರಿನ ಸೈಂಟ್ ಪೌಲ್ ಇಂಗ್ಲಿಷ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಶ್ವಿನ್ ರಾವ್ ಮತ್ತು ಪುಣೆಯ ಹಚಿಂಗ್ಸ್ ಹೈಸ್ಕೂಲ್ ನ ಮುಸ್ಕಾನ್ ಅಬ್ದುಲ್ಲಾ ಪಠಾಣ್ ಶೇಕಡಾ 99.4 ಅಂಕ ಗಳಿಸುವ ಮೂಲಕ ದೇಶಕ್ಕೆ ಮೊದಲಿಗರಾಗಿದ್ದಾರೆ. ಬೆಂಗಳೂರಿನ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಶಾಲೆಯ ನಿಕೋಲ್ ಮೇರಿಯಲ್ ಜೋಸೆಫ್ 12ನೇ ತರಗತಿಯಲ್ಲಿ ಶೇಕಡಾ... Read More
ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ: ನಿತೀಶ್ ಕುಮಾರ್ ಪ್ರಧಾನ ಸುದ್ದಿ 

ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ: ನಿತೀಶ್ ಕುಮಾರ್

ನವದೆಹಲಿ: ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿರೋಧಪಕ್ಷಗಳ ಒಗ್ಗಟ್ಟು ಹಾಗೆಯೇ ಇದೆ ಎಂದು ಸ್ಪಷ್ಟಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರನ್ನು ಭೇಟಿ ಮಾಡುವ ಗೌರವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದಾಗಿ ತಿಳಿಸಿದ್ದಾರೆ. “ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ” ಎಂದು ಪ್ರಧಾನಿಯವರನ್ನು ಭೇಟಿ ಮಾಡಿದ ನಂತರ ನಿತೀಶ್ ಕುಮಾರ್ ಮಾಧ್ಯಮಗಳಿಗೆ ಹೇಳಿದ್ದಾರೆ. ವಿರೋಧ ಪಕ್ಷಗಳ ನಾಯಕರಿಗೆ ಸೋನಿಯಾ ಗಾಂಧಿ ಅವರು ಆಯೋಜಿಸಿದ್ದ ಔತಣಕೂಟದ ಜೊತೆಗೆ, ಪ್ರಧಾನ ಮಂತ್ರಿಯವರು ಆಯೋಜಿಸಿದ್ದ ಔತಣಕೂಟಕ್ಕೆ ಹೋಲಿಸುವುದು ಸರಿಯಲ್ಲ ಎಂದಿರುವ ಜೆಡಿಯು... Read More
ಅತ್ಯಾಚಾರಕ್ಕೆ ಮುಂದಾದ ದುಷ್ಕರ್ಮಿಯ ಮರ್ಮಾಂಗ ಕತ್ತರಿಸಿದ ಯುವತಿ! ಪ್ರಧಾನ ಸುದ್ದಿ 

ಅತ್ಯಾಚಾರಕ್ಕೆ ಮುಂದಾದ ದುಷ್ಕರ್ಮಿಯ ಮರ್ಮಾಂಗ ಕತ್ತರಿಸಿದ ಯುವತಿ!

ತಿರುವನಂತಪುರಂ: ಯುವತಿಯೊಬ್ಬಳು ತನ್ನ ಮೇಲೆ ಅತ್ಯಾಚಾರವೆಸಗಲು ಮುಂದಾದ ದುಷ್ಕರ್ಮಿಯ ಮರ್ಮಾಂಗವನ್ನೇ ಕತ್ತರಿಸಿ ಹಾಕಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.ಕೇರಳದ ಕೊಲ್ಲಂ ನಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರಕ್ಕೆ ಮುಂದಾದ ದುಷ್ಕರ್ಮಿಯನ್ನು ಸ್ವಯಂ ಘೋಷಿತ ದೇವಮಾನವ ಸ್ವಾಮಿ ಗಣೇಶಾನಂದ ಅಲಿಯಾಸ್ ಹರಿ ಸ್ವಾಮಿ ಎಂದು ಹೇಳಲಾಗಿದೆ. 54 ವರ್ಷದ ಸ್ವಾಮಿ  ಯುವತಿಯ ಕುಟುಂಬಕ್ಕೆ ಸುಮಾರು ವರ್ಷಗಳಿಂದ ಪರಿಚಿತನಾಗಿದ್ದು, ಅವರ ಮನೆಯಲ್ಲಿ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿದ್ದನಂತೆ. ಅಲ್ಲದೆ ಆತ ಕೊಲ್ಲಂನಲ್ಲಿರುವ ಪನ್ಮನ ಆಶ್ರಮದ ಸದಸ್ಯ ಕೂಡ ಆಗಿದ್ದಾನೆ ಎಂದು ತಿಳಿದುಬಂದಿದೆ. ಯುವತಿ ಆರೋಪಿಸಿರುವಂತೆ ಆಕೆ 16 ವರ್ಷದವಳಾಗಿದ್ದಾಗಿನಿಂದಲೇ ಈ... Read More
ಬದ್ರಿನಾಥ್: ಭಾರಿ ಭೂ ಕುಸಿತ; ಅಪಾಯಕ್ಕೆ ಸಿಲುಕಿದ 14 ಸಾವಿರಕ್ಕೂ ಅಧಿಕ ಯಾತ್ರಿಗಳು! ಪ್ರಧಾನ ಸುದ್ದಿ 

ಬದ್ರಿನಾಥ್: ಭಾರಿ ಭೂ ಕುಸಿತ; ಅಪಾಯಕ್ಕೆ ಸಿಲುಕಿದ 14 ಸಾವಿರಕ್ಕೂ ಅಧಿಕ ಯಾತ್ರಿಗಳು!

ಡೆಹ್ರಾಡೂನ್: ಪವಿತ್ರ ಕ್ಷೇತ್ರ ಬದ್ರಿನಾಥ್ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಪರಿಣಾಮ ಸುಮಾರು 14 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳು ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಸಿದ್ಧ ಯಾತ್ರ ಸ್ಥಳ ಬದರೀನಾಥ್-ಚಾರ್’ದಾಮ್ ಯಾತ್ರಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಚಮೋಲಿ ಜಿಲ್ಲೆಯ ವಿಷ್ಣು ಪ್ರಯಾಗದ ಹಾಥಿ ಪರ್ವತ್ ನಲ್ಲಿ ಉಂಟಾದ ಭಾರಿ ಪ್ರಮಾಣದ ಭೂಕುಸಿತದಿಂದ  ಸುಮಾರು 14  ಸಾವಿರ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ. ಹೃಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ 60 ಮೀಟರ್ ರಸ್ತೆ ಹಾಗೂ ಭೂಕುಸಿತವುಂಟಾದ ಸ್ಥಳದ 150 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು,... Read More
ರಾಜ್ಯದ ಅಧಿಕಾರಿ ಯುಪಿಯಲ್ಲಿ ಮೃತ ಪ್ರಧಾನ ಸುದ್ದಿ 

ರಾಜ್ಯದ ಅಧಿಕಾರಿ ಯುಪಿಯಲ್ಲಿ ಮೃತ

ಲಖನೌ: ಉತ್ತರಪ್ರದೇಶದ ರಾಜಧಾನಿ ಲಖನೌದ ರಸ್ತೆ ಬದಿಯಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಶವ ಪತ್ತೆಯಾಗಿದೆ. ಕರ್ನಾಟಕ ಕೇಡರ್‍‍ನ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಮೃತದೇಹ ಪತ್ತೆಯಾಗಿದ್ದು ‘ಇದೊಂದು ನಿಗೂಢ ಸಾವು’ ಎಂದು ಪೊಲೀಸರು ಹೇಳಿದ್ದಾರೆ. ಲಖನೌ‍ನಿಂದ 130 ಕಿ.ಮೀ ದೂರದಲ್ಲಿರುವ ಬಹರೈಚ್ ನಿವಾಸಿಯಾದ ತಿವಾರಿ 2007ರಲ್ಲಿ ಸಿವಿಲ್ ಸರ್ವೀಸ್ ಸೇರಿದ್ದರು. ನಗರದ ಹಜ್ರತ್‍ಗಂಜ್ ಪ್ರದೇಶದಲ್ಲಿರುವ ಮೀರಾ ಭಾಯಿ ಅತಿಥಿಗೃಹ ಬಳಿ ಮೃತದೇಹ ಪತ್ತೆಯಾಗಿದೆ. ತಿವಾರಿ ಅವರು ಕಳೆದ ಎರಡು ದಿನಗಳಿಂದ ಅತಿಥಿಗೃಹದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಮೃತದೇಹ ಬಿದ್ದಿರುವುದನ್ನು... Read More
ಚಿದಂಬರಂ, ಲಾಲುಗೆ ತಪ್ಪದ ಮುಜುಗರ ಪ್ರಧಾನ ಸುದ್ದಿ 

ಚಿದಂಬರಂ, ಲಾಲುಗೆ ತಪ್ಪದ ಮುಜುಗರ

ಹಿಂದಿನ ಯುಪಿಎ ಸರಕಾರಗಳ ಇಬ್ಬರು ಪ್ರಮುಖ ಸಚಿವರು ತನಿಖಾ ಸಂಸ್ಥೆಗಳ ದಾಳಿಗೆ ಒಳಗಾಗಿರುವುದು ಕೊಂಚ ಮುಜುಗರದ ವಿಷಯವಾದರೂ ಸತ್ಯಾನ್ವೇಷಣೆಯ ನಿಟ್ಟಿನಲ್ಲಿ ಆಗಲೇಬೇಕಾದ ಅಗತ್ಯ ಕ್ರಮವೇ ಆಗಿದೆ. ಯುಪಿಎ ಮೊದಲ ಇನಿಂಗ್ಸ್‍ನಲ್ಲಿ ರೈಲ್ವೇ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ನಿಕಟವರ್ತಿಗಳ ಮೇಲೆ ವರಮಾನ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರೆ, ಇತ್ತ ಚೆನ್ನೈನಲ್ಲಿ ಮಾಜಿ ವಿತ್ತ ಮಂತ್ರಿ ಚಿದಂಬರಂ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಅಲ್ಲದೇ ಅವರ ಪುತ್ರ ಕಾರ್ತಿ ಅವರನ್ನು ಸುದೀರ್ಘ ವಿಚಾರಣೆಗೂ ಒಳಪಡಿಸಿದೆ. ರಾಜಕೀಯ ರಂಗದಲ್ಲಿ ಹೀಗೆ ದಾಳಿಗಳಾದಾಗ ಇದು... Read More
ಮಾನವ ಗುರಾಣಿ ಬಳಸಿದ್ದ ಸೇನಾಧಿಕಾರಿಗೆ ಕ್ಲೀನ್‍ಚಿಟ್ ಪ್ರಧಾನ ಸುದ್ದಿ 

ಮಾನವ ಗುರಾಣಿ ಬಳಸಿದ್ದ ಸೇನಾಧಿಕಾರಿಗೆ ಕ್ಲೀನ್‍ಚಿಟ್

ಶ್ರೀನಗರ: ಕಳೆದ ಏಪ್ರಿಲ್ 9ರಂದು ಜಮ್ಮು ಕಾಶ್ಮೀರದ ಬಡಗಾಂವ್‌ನಲ್ಲಿ ಸಹ ಯೋಧರ ರಕ್ಷಣೆಗಾಗಿ ಯುವಕನೊಬ್ಬನನ್ನು ಗುರಾಣಿಯಾಗಿ ಬಳಸಿದ್ದ ಸೇನಾಧಿಕಾರಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. ಭಾರತೀಯ ಸೇನಾ ಪಡೆಯನ್ನು  ಪ್ರತ್ಯೇಕತಾವಾದಿ ಪ್ರತಿಭಟನಕಾರರ ಕಲ್ಲೆಸೆತದಿಂದ ರಕ್ಷಿಸುವ ಸಲುವಾಗಿ ಸೇನೆಯ ಅಧಿಕಾರಿಯೋರ್ವರು ಯುವಕನೊಬ್ಬನನ್ನು  ಗುರಾಣಿಯಂತೆ ಬಳಸಿ ಚಲಿಸುವ ಜೀಪಿಗೆ ಕಟ್ಟಿದ್ದ ರು. ಪ್ರಕರಣದ ವಿಚಾರಣೆಯನ್ನು ಕೈಗೊಂಡ ನ್ಯಾಯಾಲಯವು ಆರೋಪಿ ಅಧಿಕಾರಿಗೆ ಕ್ಲೀನ್‌ ಚಿಟ್‌ ನೀಡಿದೆ.  ಅಲ್ಲದೆ, ಯೋಧರ ಜೀವ ಉಳಿಸುವುದಕ್ಕಾಗಿ ಆತ ಕಂಡುಕೊಂಡ ಈ ಉಪಾಯವನ್ನು ಬಹುವಾಗಿ ಪ್ರಶಂಸಿಸಿದೆ. ಘಟನೆಯ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದನ್ನು ಅನುಸರಿಸಿ... Read More
ಸೈಬರ್ ಕ್ರೈಂ ಕಡಿವಾಣಕ್ಕೆ ಪೊಲೀಸರಿಗೆ ತರಬೇತಿ ಪ್ರಧಾನ ಸುದ್ದಿ 

ಸೈಬರ್ ಕ್ರೈಂ ಕಡಿವಾಣಕ್ಕೆ ಪೊಲೀಸರಿಗೆ ತರಬೇತಿ

 ಬೆಂಗಳೂರು: ರಾಜ್ಯಾದ್ಯಂತ ಹೆಚ್ಚುತ್ತಿರುವ ಸೈಬರ್ ಕ್ರೈಂಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರಿಗೆ ವಿಶೇಷ ತರಬೇತಿ ನೀಡಲು ಪೊಲೀಸ್ ಇಲಾಖೆ ಚಿಂತನೆ ನಡೆಸಿರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.       ರಾಮನಗರ ಜಿಲ್ಲೆ ಚನ್ನಪಟ್ಟಣದ ಬಳಿಯಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಸೋಮವಾರ ಬೆಂಗಳೂರು ನಗರ, ಕೇಂದ್ರ ವಲಯ ಮತ್ತು ದಕ್ಷಿಣ ವಲಯದ ಸಿಪಿಸಿಗಳಿಗೆ ಹಮ್ಮಿಕೊಂಡಿದ್ದ ಪುನರ್ ಮನನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವುದು ಪೊಲೀಸರಿಗೆ ದೊಡ್ಡ ಸವಾಲು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಸೈಬರ್... Read More