You are here
ಸೂಟ್‌ಕೇಸ್ ನಾಯಕರು ಜೆಡಿಎಸ್‌ ಬಿಟ್ಟಿದ್ದಾರೆ ರಾಜ್ಯ 

ಸೂಟ್‌ಕೇಸ್ ನಾಯಕರು ಜೆಡಿಎಸ್‌ ಬಿಟ್ಟಿದ್ದಾರೆ

ಬೆಂಗಳೂರು: ಸೂಟ್‌ಕೇಸ್ ರಾಜಕಾರಣಿಗಳೂ ಈಗ ಜೆಡಿಎಸ್‌ನಲ್ಲಿಲ್ಲ. ಅವರಿಂದ ಪಕ್ಷ ಮುಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷದ ಭಿನ್ನ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಕುಮಾರಸ್ವಾಮಿ ಯುವ ಮುಖಂಡ ಪ್ರಜ್ವಲ್ ಹೇಳಿರುವಂತೆ ಸೂಟ್‌ಕೇಸ್ ರಾಜಕಾರಣ ಮಾಡಿತ್ತ ಮುಂದಿನ ಸಾಲಿನಲ್ಲಿ ಕಳಿತುಕೊಳ್ಳುತ್ತಿದ್ದ ನಾಯಕರು ಈಗ ಪಕ್ಷದಿಂದ ಹೊರಗಿದ್ದಾರೆ. ಬಹುಶಃ ಅವರನ್ನು ಉದ್ದೇಶಿಸಿಯೇ ಪ್ರಜ್ವಲ್ ಆ ಮಾತುಗಳನ್ನು ಆಡಿರಬೇಕೇ ಹೊರತು ಸದ್ಯದ ಮುಖಂಡರ ಬಗ್ಗೆಯಂತೂ ಅಲ್ಲ ಎಂದರು. ಈ ಮುಂಚೆ ಜೆಡಿಎಸ್‌ನಲ್ಲಿ ಸೂಟ್‌ಕೇಸ್ ರಾಜಕಾರಣ ಮಾಡುವ ಮುಖಂಡರು ಇದ್ದರು. ಸೂಟ್‌ಕೇಸ್ ಪಡೆದು ಮುಂದಿನ ಸಾಲಿನಲ್ಲಿ... Read More
ವರ್ಗಾವಣೆ ಅರ್ಜಿ ಪರಿಶೀಲನೆ ಕಾರ್ಯ ಶೀಘ್ರ ಪೂರ್ಣ: ರಾಮಲಿಂಗಾರೆಡ್ಡಿ ರಾಜ್ಯ 

ವರ್ಗಾವಣೆ ಅರ್ಜಿ ಪರಿಶೀಲನೆ ಕಾರ್ಯ ಶೀಘ್ರ ಪೂರ್ಣ: ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಅಂತರ ನಿಗಮ ವರ್ಗಾವಣೆಗೆ ಇಚ್ಛಾಪತ್ರ ಸಲ್ಲಿಸಲು ಕೊನೆಯ ದಿನಾಂಕ ಮುಗಿದಿದ್ದು, ಇದುವರೆಗೆ 17 ಸಾವಿರಕ್ಕೂ ಹೆಚ್ಚು ನೌಕರರು ಇಚ್ಛಾಪತ್ರವನ್ನು ಸಲ್ಲಿಸಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವರ್ಗಾವಣೆ ಪಕ್ರಿಯೆಯನ್ನು ಮಾಸಾಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೂನ್‍ 24ರಿಂದ ವರ್ಗಾವಣೆ ಇಚ್ಛಾಪತ್ರವನ್ನು ಸಲ್ಲಿಸಲು ಅನುಮತಿ ನೀಡಲಾಗಿತ್ತು. ಈ ಪೈಕಿ ಶೇ. 50ಕ್ಕಿಂತ ಹೆಚ್ಚು ನೌಕರರು ಬಿಎಂಟಿಸಿಯವರೇ ಸಲ್ಲಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಸದ್ಯ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ವರ್ಗಾವಣೆ ಸಿಗಲಿದೆ.... Read More
ಕೊರಟಗೆರೆಯಿಂದಲೇ ಸ್ಪರ್ಧೆ: ಪರಂ ರಾಜ್ಯ 

ಕೊರಟಗೆರೆಯಿಂದಲೇ ಸ್ಪರ್ಧೆ: ಪರಂ

ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನ ಹೊರವಲಯದಲ್ಲಿರುವ ಹೆಗ್ಗೆರೆಯಲ್ಲಿ ಭಾನುವಾರ ತಮ್ಮ ಬೆಂಬಲಿಗರ ಸಭೆ ನಡೆಸಿದ ಪರಮೇಶ್ವರ್ ಕೊರಟಗೆರೆ ತೊರೆದು ಬೇರೆ ಕಡೆ ಚುನಾವಣೆಗೆ ಸ್ಪರ್ದಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ೨೦೧೩ರ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋತಿದ್ದ ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆಯ ರೇಸಿನಿಂದ ಹಿಂದೆ ಸರಿಯುವಂತಾಗಿತ್ತು. ಈ ಸೋಲಿಗೆ ಪಕ್ಷದವರೇ ಪಿತೂರಿಯೇ ಕಾರಣ ಎಂದು ಪರಮೇಶ್ವರ್ ನೇರವಾಗಿಯೇ ಆರೋಪಿಸಿದ್ದರು. ಭಾನುವಾರದ ಸಭೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರು ಈ ಬಾರಿ ಹಿಂದಿಯನ್... Read More
ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟ, ಲಾಠಿ ರಾಜ್ಯ 

ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟ, ಲಾಠಿ

ಮಂಗಳೂರು: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗುರುವಾರ ಮೈತಪಟ್ಟ ಶರತ್ ಮಡಿವಾಳ ಅವರ ಶವಯಾತ್ರೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಕಾರಣ ಕೆಲ ಕಾಲ ಉದ್ವೇಗದ ವಾತಾವರಣ ನಿರ್ಮಾಣವಾಗಿ ಪೊಲೀಸರು ಲಾಠಿ ಪ್ರಹಾರ ನಡೆಸುವಂತಾಯಿತು. ಬೆಳಿಗ್ಗೆ ಮಂಗಳೂರಿನ ಎ. ಜೆ ಆಸ್ಪತ್ರೆಯಿಂದ ಅಂತಿಮ ಕ್ರಿಯೆಗಾಗಿ ಅವರ ಮೃತದೇಹವನ್ನು ಸ್ವಗ್ರಾಮ ಸಜಿಪಕ್ಕೆ ತೆಗೆದುಕೊಡು ಹೋಗಲಾಯಿತು.ಆದರೆ ಶವಯಾತ್ರೆ ಬಿ.ಸಿ ರೋಡ್’ಗೆ ತಲುಪುತ್ತಿದ್ದಂತೆಯೇ ಯಾರೋ ಕೆಲ ಕಿಡಿಗೇಡಿಗಳು ಕಲ್ಲು ತರಾಟ ನಡೆಸಿದರು. ಇದರಿಂದಾಗಿ ಖಾಸಗಿ ಬಸ್ ಸೇರಿದಂತೆ ಕೆಲ ವಾಹನಗಳ ಕಲ್ಲು ತೂರಾಟದಲ್ಲಿ ಜಖಂಗೊಂಡವು. ಪರಿಸ್ಥಿತಿ ಕೈಮೀರುವ ಅಪಾಯ ಇದ್ದ... Read More
ಬಿಜೆಪಿ ಆಟ ಇಲ್ಲಿ ನಡೆಯದು: ಸಿದ್ದು ರಾಜ್ಯ 

ಬಿಜೆಪಿ ಆಟ ಇಲ್ಲಿ ನಡೆಯದು: ಸಿದ್ದು

ಮಂಗಳೂರು: ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಇನ್ನೊಂದು ಉತ್ತರಪ್ರದೇಶ ಮಾದರಿ ಪ್ರಯೋಗ ಮಾಡಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಂಗಳುರಿನ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದತೆ ಕದಡಿ. ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಕೆಲಸಕ್ಕೆ ಕೆಲ ಸಂಘಟನೆಗಳು ಪ್ರಯತ್ನಿಸುತ್ತಿವೆ. ಆದರೆ ಇಂತಹ ಕುತ್ಸಿತ ಪ್ರಯತ್ನಗಳು ಯಶಸ್ವಿಯಾಗಲು ಸರಕಾರ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಉತ್ತರಪ್ರದೇಶದಲ್ಲಿ ಮಾಡಿದಂತೆ ಜನರನ್ನು ಕೋಮು ವಿಷಯದಲ್ಲಿ ಒಡೆದು ಆಳುವ ಪ್ರಯತ್ನ ಕರ್ನಾಟಕದಲ್ಲಿ ನಡೆಯದು ಮತ್ತು ನಡೆಯಲು ಬಿಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ... Read More
ಮೆಟ್ರೊ ಸಿಬ್ಬಂದಿ ಮುಷ್ಕರ: ಪ್ರಯಾಣಿಕರ ಪರದಾಟ ರಾಜ್ಯ 

ಮೆಟ್ರೊ ಸಿಬ್ಬಂದಿ ಮುಷ್ಕರ: ಪ್ರಯಾಣಿಕರ ಪರದಾಟ

ಬೆಂಗಳೂರು: ನಮ್ಮ ಮೆಟ್ರೋದ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ನಡೆಸಿದ ಹಠಾತ್ ಮುಷ್ಕರದಿಂದಾಗಿ ಬಹುಕಾಲ ರೈಲು ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಮೆಟ್ರೊ ಸಿಬ್ಬದಿ ಮತ್ತು ರಾಜ್ಯ ಕೈಗಾರಿಕಾ ಭದ್ರತಾ ಸಿಬ್ಬಂದಿ ನಡುವಿನ ಚಕಮಕಿ ಈ ಮುಷ್ಕರಕ್ಕೆ ಕಾರಣವಾಗಿತ್ತು. ಈ ದಿಢೀರ್‍ ಬೆಳವಣಿಗೆಯಿಂದಾಗಿ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ತೊಂದರೆಗೆ ಒಳಗಾಗಬೇಕಾಯಿತು. ಒಂದು ಹಂತದಲ್ಲಿ ಯಾವುದೇ ರಾಜಿ ಪಂಚಾಯ್ತಿಗೆ ಮುಷ್ಕರ ನಿರತರು ಒಪ್ಪದಿದ್ದಾಗ ರಾಜ್ಯ ಸರಕಾರ ಎಸ್ಮಾ ಕಾಯಿದೆ ಜಾರಿ ಬೆದರಿಕೆ ಒಡ್ಡಬೇಕಾಗಿ ಬಂತು. ಆ ನಂತರದಲ್ಲಿ ಹಠ ಬಿಟ್ಟ ಸಿಬ್ಬಂದಿ ಮುಷ್ಕರ ಕೈಬಿಡಲು ನಿರ್ಧರಿಸಿದರು.... Read More
ಜುಲೈ ಅಂತ್ಯದೊಳಗೆ ಸಾರಿಗೆ ನೌಕರರ ಅಂತರ್ ನಿಗಮ ವರ್ಗಾವಣೆ ರಾಜ್ಯ 

ಜುಲೈ ಅಂತ್ಯದೊಳಗೆ ಸಾರಿಗೆ ನೌಕರರ ಅಂತರ್ ನಿಗಮ ವರ್ಗಾವಣೆ

ಬೆಂಗಳೂರು: ಸಾರಿಗೆ ನೌಕರರ ಅಂತರ್ ನಿಗಮ ವರ್ಗಾವಣೆ ಆದೇಶವನ್ನು ಜೂ.6ರಂದು ಹೊರಡಿಸಿದ್ದು ಜುಲೈ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಈವರೆಗೆ ಅಂತರ್‍ನಿಗಮ ವರ್ಗಾವಣೆ ಪ್ರಶ್ನೆಯೇ ಇರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜೂ.6ರಂದು ಸರ್ಕಾರ ಆದೇಶ ಹೊರಡಿಸಿದ್ದು, ವರ್ಗಾವಣೆಯನ್ನು ಒಂದು ಬಾರಿಯ ಪ್ರಕ್ರಿಯೆಯಾಗಿ ಜುಲೈ 31ರೊಳಗೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಸಂಬಂಧ ಸರ್ಕಾರ ಮಟ್ಟದಲ್ಲಿ ಕಳೆದ ಸಾಲಿನ ಜುಲೈನಲ್ಲಿ ನಡೆದ ಸಾರಿಗೆ ನಿಗಮಗಳ ನೌಕರರ ವೇತನವನ್ನು ಶೇ. 12.5ರಷ್ಟು ಹೆಚ್ಚಿಸಲು... Read More
ಮೋದಿ ಟೀಕಿಸಲು ರಾಹುಲ್ ಎಳಸು: ಶೋಭಾ ರಾಜ್ಯ 

ಮೋದಿ ಟೀಕಿಸಲು ರಾಹುಲ್ ಎಳಸು: ಶೋಭಾ

ಕಲಬುರಗಿ: ಎಲ್ಲಿಯ ಪ್ರಧಾನಿ ಮೋದಿ, ಎಲ್ಲಿಯ ರಹುಲ್ ಗಾಂಧಿ. ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ರಹು‌ಲ್‌ ಗಾಂಧಿಗಿದೆಯಾ ಎಂದು ಬಿಜೆಪಿ ಸಂಸದೆ ಶೋಭಾ ಕರಾಂದ್ಲಾಜೆ ಕಿಡಿ ಕಾರಿದ್ದಾರೆ. ಅಮೆರಿಕ ಪ್ರವಾಸದ ವೇಳೆ ಎಚ್‌೧ಬಿ ವೀಸಾ ಸಂಬಂಧ ಭಾರತದ ನಿಲುವನ್ನುಗೆ ಅಧ್ಯಕ್ಷ ಟ್ರಂಪ್ ಅವರಿಗೆ ಮನದಟ್ಟು ಮಾಡಿಕೊಡುವಲ್ಲಿ ಮೋದಿ ವಿಫಲರಾಗಿದ್ದು, ಅವರು ದುರ್ಬಲ ಪ್ರಧಾನಿ ಎಂದು ರಾಹುಲ್ ಗಾಂದಿ ಟೀಕಿಸಿದ್ದರು. ರಾಹುಲ್ ಟೀಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶೋಭಾ, ಮೋದಿ ಅವರ ಸಾಮರ್ಥ್ಯವನ್ನು ಇಡೀ ಜಗತ್ತೇ ಹೊಗಳುತ್ತಿದೆ. ಹಾಗಿದ್ದಾಗ ಅವರನ್ನು ಟೀಕಿಸುವುದರಲ್ಲಿ ಏನರ್ಥ.... Read More
ಉಪಚುನಾವಣೆ: ಜೆಡಿಎಸ್‌ ಉತ್ತಮ ಸಾಧನೆ ರಾಜ್ಯ 

ಉಪಚುನಾವಣೆ: ಜೆಡಿಎಸ್‌ ಉತ್ತಮ ಸಾಧನೆ

ಬೆಂಗಳೂರು: ರಾಜ್ಯದ ಹಲವು ಕಡೆ ನಡೆದ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಉತ್ತಮ ಪ್ರದರ್ಶನ ನೀಡಿದ್ದು ಕಾಂಗ್ರೆಸ್‌ ಹಾಗೂ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ. ಮೈಸೂರು ಪಾಲಿಕೆ ಹಾಗೂ ಕೋಲಾರ ಮತ್ತು ಮಂಡ್ಯ ನಗರಸಭೆ ಉಪಚುನಾವಣೆಯಲ್ಲಿ ಕ್ರಮವಾಗಿ ಜೆಡಿೆಸ್‌ನ ಎಸ್‌ಬಿಎಂ ಮಂಜು, ಮೋಹನ್ ಪ್ರಕಾಶ್ ಹಾಗೂ ರಾಜು ಜಯಭೇರಿ ಬಾರಿಸಿದೆ. ಮೈಸೂರು ಪಾಲಿಕೆಗೆ (೩೨ನೇ ವಾರ್ಡ್‌) ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಹುರಿಯಾಳು ಮೂರನೇ ಸ್ಥಾನ ಪಡೆದರೆ, ಕೋಲಾರ (೨೧ನೇ ವಾರ್ಡ್‌) ಹಾಗೂ ಮಂಡ್ಯದಲ್ಲಿ (೨೮ನೇ ವಾರ್ಡ್‌) ಎರಡನೇ ಸ್ಥಾನ ಪಡೆದರು. ಇದೇ ವೇಳೇ... Read More
ಕೊನೆಗೂ ತೆನೆ ಹಿಡಿದ ವಿಶ್ವನಾಥ್ ರಾಜ್ಯ 

ಕೊನೆಗೂ ತೆನೆ ಹಿಡಿದ ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್‌ ಜೊತೆಗಿನ ದಶಕಗಳ ನಂಟು ಕಳೆದುಕೊಂಡ ನಂತರ ಮಾಜಿ ಸಂಸದ ಅಡಗೂರು ವಿಶ್ವನಾಥ್ ಕೊನೆಗೂ ಜಾತ್ಯತೀತ ಜನತಾದಳದ ತೆಕ್ಕೆ ಸೇರಿದ್ದಾರೆ. ಬೆಂಗಳೂರಿನಲ್ಲಿರುವ ಜೆಪಿ ಭವನದಲ್ಲಿ ಮಾಝಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ವಿಶ್ವನಾಥ್ ಜಾತ್ಯತೀತ ಜನತ ದಳವನ್ನು ಅಧಿಕೃತವಾಗಿ ಸೇರಿದರು. ವಿಶ್ವನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್‌ನ ಅಸ್ತಿತ್ವದ ಬಗ್ಗೆ ಮಾತನಾಡುವ ಜನರಿಗೆ ವಿಶ್ವನಾಥ್ ಸೇರ್ಪಡೆ ಉತ್ತರ ನೀಡಿದೆ ಎಂದರು. ಅಲ್ಲದೇ ಬಿಜೆಪಿಯ ಶತಪ್ರಯತ್ನದ ನಡುವೆಯೂ ಜೆಡಿಎಸ್‌ ಪಕ್ಷವನ್ನು ಆಯ್ಕೆ ಮಾಡಿಕೊಂಡ ವಿಶ್ವನಾಥ್ ಮುಂದಿನ ಚುನಾವಣೆಯಲ್ಲಿ... Read More