You are here
ಸಿದ್ದು ಶಾದಿ ಭಾಗ್ಯ, ಮೋದಿ ಶಾದಿ ಶಗುನ್! ದೇಶ-ವಿದೇಶ 

ಸಿದ್ದು ಶಾದಿ ಭಾಗ್ಯ, ಮೋದಿ ಶಾದಿ ಶಗುನ್!

ಹೈದರಾಬಾದ್: ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಹೆಣ್ಣು ಮಕ್ಕಳಿಗೆ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಾಗ ಭಾರೀ ವಿರೋಧ ವ್ಯಕ್ತಪಟಿಸಿದ್ದ ಬಿಜೆಪಿ ಈಗ ಕೇಂದ್ರ ಸರಕಾರದ ವತಿಯಿಂದ ಇಂತಹುದೇ ಯೋಜನೆಯೊಂದನ್ನು ಜಾರಿಗೆ ತರಲು ಹವಣಿಸುತ್ತಿದೆ. ರಾಜ್ಯದ ಶಾದಿ ಭಾಗ್ಯದ ಮಾದರಿಯಲ್ಲಿಯೇ ಶಾದಿ ಶಗುನ್ ಎಂಬ ಯೋಜನೆಯನ್ನು ಜರಿಗೆ ತರಲು ನರೇಂದ್ರ ಮೋದಿ ಸರಕಾರ ನಿರ್ಧರಿಸಿದ್ದು ಇದಕ್ಕೆ ಬೇಕಾದ ತಯಾರಿ ನಡೆಸಿದೆ. ಪದವಿ ಪೂರೈಸಿ ವಿದ್ಯಾರ್ಥಿವೇತನ ಪಡೆಯುತ್ತಿರುವ ಹೆಣ್ಣು ಮಕ್ಕಳ ವಿವಾಹಕ್ಕೆ ‘ಶಾದಿ ಶಗುನ್’ ಯೋಜನೆಯ ಅಡಿಯಲ್ಲಿ ನೆರವು ನೀಡಲಾಗುವುದು. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ... Read More
ಮೀಸಾ ನಿವಾಸದ ಮೇಲೆ ದಾಳಿ ದೇಶ-ವಿದೇಶ 

ಮೀಸಾ ನಿವಾಸದ ಮೇಲೆ ದಾಳಿ

ನವದೆಹಲಿ: ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್, ಪತ್ನಿ, ಪುತ್ರನ ನಂತರ ಈಗ ಪುತ್ರಿ ಮೀಸಾ ಭಾರತಿ ಮನೆ ಮೇಲೆ ಜಾರಿ ನಿರ್ದೇಶನಾಲು ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಶನಿವಾರ ದೆಹಲಿಯ ಸೈನಿಕ್ ಫಾರಂನಲ್ಲಿರುವ ಮೀಸಾ ಅವರ ನಿವಾಸದ ಮೇಲಷ್ಟೇ ಅಲ್ಲದೇ ಇತರ ಮೂರು ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತು. ಅಕ್ರಮ ಹಣ ವರ್ಗಾವಣೆ ಮತ್ತು ಕಪ್ಪು ಹಣ ಸಂಗ್ರಹಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಕಳೆದ ಸೋಮವಾರ ರಾಜೇಶ್ ಅಗರ್ವಾಲ್ ಅವರನ್ನು ಬಂಧಿಸಲಾಗಿತ್ತು. ಲಾಲೂ... Read More
ಅಯ್ಯಪ್ಪನ ಹುಂಡಿಯಲ್ಲಿ ಪಾಕ್ ನೋಟು! ದೇಶ-ವಿದೇಶ 

ಅಯ್ಯಪ್ಪನ ಹುಂಡಿಯಲ್ಲಿ ಪಾಕ್ ನೋಟು!

ತಿರುವನಂತಪುರಂ: ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ನಾನಾ ಕಡೆಗಳಿಂದ ಭಕ್ತರು ಬರುವುದು ಹೊಸ ವಿಯವೇಲ್ಲ. ಹಾಗೆ ಬರುವ ಭಕ್ತರು ಕಾಣಿಕೆ ಅರ್ಪಿಸುವುದೂ ಅಪರೂಪವೇನಲ್ಲ. ಆದರೆ ಈಗ ಅಯ್ಯಪ್ಪ ಕಾಣಿಕೆ ಹುಂಡಿಯಲ್ಲಿ ಪಾಕಿಸ್ತಾನಿ ನೋಟು ಸಿಕ್ಕಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹೌದು, ಅಯ್ಯಪ್ಪನ ಕಾಣಿಕ ಹುಂಡಿಯಲ್ಲಿ ಪಾಕಿಸ್ತಾನದ ೨೦ ರೂಪಾಯಿ ನೋಟು ಸಿಕ್ಕಿದ್ದು, ಅಧಿಕಾರಿಗಳು ಇದರ ಮಾಲಿಕನ ಜಾಡು ಹಿಡಿಯುವಲ್ಲಿ ಕಾರ್‍ಯೋನ್ಮುಖರಾಗಿದ್ದಾರೆ. ಹುಂಡಿಯಲ್ಲಿ ಈ ರೀತಿ ಪಾಕಿಸ್ತಾನಿ ನೋಟು ಸಿಕ್ಕಿರುವುದು ಇದೇ ಮೊದಲಾಗಿದೆ. ಪಾಕಿಸ್ತಾನದಿಂದ ಇಲ್ಲಿಗೆ ಬಂದು ಕಾಣಿಕೆ ಹಾಕುವುದು ಇಂದಿನ ಪರಿಸ್ಥಿತಿಯಲ್ಲಿ ಊಹಿಸುವುದು ಕಷ್ಟ. ಹಾಗಿದ್ದರೆ... Read More
ರದ್ದಾದ ನೋಟು ವಾಪಸಿಗೆ ಇನ್ನೊಂದು ಆವಕಾಶ? ದೇಶ-ವಿದೇಶ 

ರದ್ದಾದ ನೋಟು ವಾಪಸಿಗೆ ಇನ್ನೊಂದು ಆವಕಾಶ?

ನವದೆಹಲಿ: ಕಾರಣಾಂತರಗಳಿಂದ ನಿಗದಿತ ಅವಧಿಯಲ್ಲಿ ತಮ್ಮ ಬಳಿ ಇದ್ದ ಹಳೆಯ ನೋಟುಗಳನ್ನು ಬ್ಯಾಂಕಿಗೆ ಹಿಂತಿರುಗಿಸಲು ಇನ್ನೊಂದು ಅವಕಾಶ ಏಕೆ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರವನ್ನು ಕೇಳಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಇಂತಹ ಸಾಧ್ಯತೆ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ಎರಡು ವಾರಗಳ ಕಾಲವಕಾಶ ನೀಡಿದೆ. ಅನಿವಾಸಿ ಭಾರತೀಯರೂ ಸೇರಿದಂತೆ ಅನೇಕರು ತಮ್ಮ ಬಳಿ ಇರುವ ಅನೇಕ ನೋಟುಗಳನ್ನು ಕಾರಣಾಂತರಗಳಿಂದ ಹಿಂದಿರುಗಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹಳೇ ನೋಟುಗಳನ್ನು ಹಿಂದಿರುಗಿಸಿ ಹೊಸ ಕರೆನ್ಸಿಗಳನ್ನು... Read More
ರಾಷ್ಟ್ರಪತಿ ಚುನಾವಣೆ: ಕಣಕ್ಕಿಳಿದ ಮೀರಾ ದೇಶ-ವಿದೇಶ 

ರಾಷ್ಟ್ರಪತಿ ಚುನಾವಣೆ: ಕಣಕ್ಕಿಳಿದ ಮೀರಾ

ನವದೆಹಲಿ: ಮುಂದಿನ ತಿಂಗಳು ನಡೆಯುವ ರಾಷ್ಟ್ರಪತಿ ಹುದ್ದಯೆ ಚುನಾವಣೆಗೆ ಪ್ರತಿಪಕ್ಷಗಳ ಹುರಿಯಾಳಾಗಿ ಮೀರಾ ಕುಮಾರ್‍ ಬುಧವಾರ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ತಮ್ಮನ್ನು ಬೆಂಬಲಿಸುತ್ತಿರುವ ಎಲ್ಲ ೧೭ ವಿರೋಧ ಪಕ್ಷಗಳ ನಾಯಕರ ಉಪಸ್ಥಿತಿಯಲ್ಲಿ ಮೀರಾ ಕುಮಾರ್‍ ತಮ್ಮ ಉಮೇದುವಾರಿಕೆಯ ಅರ್ಜಿ ದಾಖಲಿಸಿದರು. ರಾಷ್ಟ್ರಪತಿ ಆಯ್ಕೆಗೆ ಜುಲೈ 17ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ಮೀರಾ ಕುಮಾರ್ ಎನ್‍ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ವಿರುದ್ಧ ಸ್ಪರ್ಧಿಸಿದ್ದಾರೆ. ಈ ಚುನಾವಣೆಯು ದಲಿತ ವಿರುದ್ಧ ದಲಿತ ಅಭ್ಯರ್ಥಿಯ ಹೋರಾಟವಲ್ಲ. ಜನತಂತ್ರ ಮೌಲ್ಯಗಳ ವೇದಿಕೆ ಮೇಲೆ... Read More
ಜಿಎಸ್‌ಟಿ ಜಾರಿಗೆ ದೀದಿ ವಿರೋಧ ದೇಶ-ವಿದೇಶ 

ಜಿಎಸ್‌ಟಿ ಜಾರಿಗೆ ದೀದಿ ವಿರೋಧ

ಕೋಲ್ಕತ್ತ: ಜುಲೈ ಒಂದರಿಂದ ಸರಕು ಸೇವಾ ತೆರಿಗೆ ಜಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇದೇ ೩೦ರಂದು ಮಧ್ಯರಾತ್ರಿ ಹಮ್ಮಿಕೊಳ್ಳಲಾಗಿರುವ ಸಂಸತ್ತಿನ ವಿಶೇಷ ಅಧಿವೇಶನವನ್ನು ತಮ್ಮ ಪಕ್ಷ, ತೃಣಮೂಲ ಕಾಂಗ್ರೆಸ್, ಬಹಿಷ್ಕರಿಸಲಿದೆ ಎಂದು ಮಮತಾ ಹೇಳಿದ್ದಾರೆ. ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳ ನೈಜ ಆತಂಕಗಳನ್ನು ಕಡೆಗಣಿಸಿ ಕೇಂದ್ರ ಸರಕಾರ ತರಾತುರಿಯಿಂದ ಜಿಎಸ್‌ಟಿ ಜಾರಿಗೆ ತರಲು ಮುಂದಾಗಿರುವುದು ತರವಲ್ಲ. ಈ ಮಹತ್ವದ ಸುಧಾರಣೆ ಜಾರಿ ಮಾಡುವ ಮುನ್ನ ಎಲ್ಲ ವರ್ಗಗಳ ಸಂಕಷ್ಟಗಳಿಗೆ ಕಿವಿಗೊಟ್ಟು ಅದನ್ನು ಪರಿಹರಿಸಬೇಕಾದ್ದು ಸರಕಾರದ ಕರ್ತವ್ಯವಾಗಿದೆ.... Read More
ರಾಮಮಂದಿರ ನಿರ್ಮಾಣ ಉಡುಪಿಯಲ್ಲಿ ತೀರ್ಮಾನ: ಸಾಕ್ಷಿ ದೇಶ-ವಿದೇಶ 

ರಾಮಮಂದಿರ ನಿರ್ಮಾಣ ಉಡುಪಿಯಲ್ಲಿ ತೀರ್ಮಾನ: ಸಾಕ್ಷಿ

ಕಾನ್ಪುರ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಸಂಬಂಧ ಅಂತಿಮ ದಿನಾಂಕವನ್ನು ಉಡುಪಿಯಲ್ಲಿ ಘೋಷಿಸುವುದಾಗಿ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಇದೇ ನವೆಂಬರ್ ನಲ್ಲಿ ಉಡುಪಿಯಲ್ಲಿ ಸಂತರ ಸಮ್ಮೇಳನ ನಡೆಯಲಿದೆ. ಆ ಸಮ್ಮೇಳನದಲ್ಲಿ ರಾಮಮಂದಿರ ನಿರ್ಮಾಣ ಆರಂಭವಾಗುವ ಅಂತಿಮ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಸಾಕ್ಷಿ ಮಹಾರಾಜ್ ತಿಳಿಸಿದರು. ಈ ಸಂಬಂಧ ತಾವೇ ಖುದ್ದಾಗಿ ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿರುವುದಾಗಿ ಸಾಕ್ಷಿ ಮಹಾರಾಜ್ ಹೇಳಿದ್ದು ಸಂತರ ಸಮ್ಮೇಳನದ ತೀರ್ಮಾನವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು. Read More
ಉದ್ರಿಕ್ತರ ಕಲ್ಲೇಟಿಗೆ ಪೊಲೀಸ್ ಅಧಿಕಾರಿ ಬಲಿ ದೇಶ-ವಿದೇಶ 

ಉದ್ರಿಕ್ತರ ಕಲ್ಲೇಟಿಗೆ ಪೊಲೀಸ್ ಅಧಿಕಾರಿ ಬಲಿ

ಶ್ರೀನಗರ: ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಬಾಬುಡುಕನಾಗಿರುವ ಮೀರ್ವಾಯಿಜ್ ಉಮರ್‍ ಫಾರೂಖ್ ಶ್ರೀನಗರದ ಜಾಮಿಯಾ ಮಸೀದಿ ಒಳಗೆ ಇದ್ದಂತೆಯೇ ಹೊರಗೆ ಭದ್ರತೆಗಾಗಿ ನಿಯೋಜಿಸಲಾಗಿದ್ದ ಡಿವೈಎಸ್ಪಿಯನ್ನು ಸ್ಥಳೀಯ ಉದ್ರಿಕ್ತರು ಕಲ್ಲೆಸೆದು ಹತ್ಯೆ ಮಾಡಿ ಅಮಾನವೀಯತೆ ಮೆರೆದಿದ್ದಾರೆ. ಗುರುವಾರ ತಡರಾತ್ರಿ ಜಾಮಿಯಾ ಮಸೀದಿಯಲ್ಲಿ ರಂಜಾನ್ ಪ್ರಯುಕ್ತ ರಾತ್ರಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಆಗ ಮಸೀದಿ ಬಳಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಅಧಿಕಾರಿ ಮೊಹಮ್ಮದ್ ಆಯುಬ್ ಪಂಡಿತ್ ಎಂಬುವವರ ಮೇಲೆ ಈ ದಾಳಿ ನಡೆಸಲಾಯಿತು. ಜನರು ಹಲ್ಲೆ ನಡೆಸಲು ಮುಂದಾಗುತ್ತಿದ್ದಂತೆಯೇ ಆಯುಬ್ ಅವರು ಸ್ವರಕ್ಷಣೆಗಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿ, ಸ್ಥಳದಿಂದ ಓಡಲು ಯತ್ನಿಸಿದ್ದಾರೆ.... Read More
ಬಿಜೆಪಿ ಪರ ವಾಲಿದ ನಿತೀಶ್ ಕುಮಾರ್‍ ದೇಶ-ವಿದೇಶ 

ಬಿಜೆಪಿ ಪರ ವಾಲಿದ ನಿತೀಶ್ ಕುಮಾರ್‍

ಪಾಟ್ನಾ: ರಾಷ್ಟ್ರಪತಿ ಹುದ್ದೆಗೆ ಆಡಳಿತಾರೂಊಢ ಬಿಜೆಪಿ ಮೈತ್ರಿಕೂಟ್ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಅವರಿಗೆ ಬೆಂಬಲ ನೀಡಲು ನಿತೀಶ್ ಕುಮಾರ್‍ ಅವರ ಜೆಡಿಯು ಪಕ್ಷ ನಿರ್ಧರಿಸಿದೆ. ಇದರಿಂದಾಗಿ ಪ್ರತಿಸ್ಪರ್ಧಿ ನಿಲ್ಲಿಸುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಪ್ರಯತ್ನಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಈ ಬಗ್ಗೆ ನಾಳೆ ನಡೆಯಲಿರುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಜೆಡಿಯುನ ಹಿರಿಯ ಶಾಸಕರೊಬ್ಬರು ತಿಳಿಸಿದ್ದಾರೆ. ಈ ನಡುವೆ ಉತ್ತರ ಪ್ರದೇಶದ ಪ್ರಮುಖ ಪಕ್ಷಗಳಾದ ಬಹುಜನ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ... Read More
ಉಗ್ರರ ಗುಂಡಿಗೆ ೬ ಪೊಲೀಸರ ಬಲಿ ದೇಶ-ವಿದೇಶ 

ಉಗ್ರರ ಗುಂಡಿಗೆ ೬ ಪೊಲೀಸರ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಚಬಾಲ್ ನಲ್ಲಿ ಪೊಲೀಸರ ಮೇಲೆ ಶುಕ್ರವಾರ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಠಾಣಾಧಿಕಾರಿ ಸೇರಿ ಐವರು ಪೊಲೀಸರು ಹುತಾತ್ಮರಾಗಿದ್ದಾರೆ. ಠಾಣಾಧಿಕಾರಿ ಹಾಗೂ ಪೊಲೀಸರು ತೆರಳುತ್ತಿದ್ದ ವಾಹನದ ಮೇಲೆ ಸುಮಾರು 10 ಮಂದಿ ಶಸ್ತ್ರಸಜ್ಜಿತ ಉಗ್ರರ ತಂಡ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ಸೇನೆ ಮತ್ತು ಕಾಶ್ಮೀರ ಪೊಲೀಸರು ಪರಾರಿಯಾಗಿರುವ ಉಗ್ರರಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. Read More