You are here
ರಾಜಕೀಯದ ಗೊಡವೆ ನನಗಿಲ್ಲ: ಶಿವಣ್ಣ ಸಿನಿಮಾ 

ರಾಜಕೀಯದ ಗೊಡವೆ ನನಗಿಲ್ಲ: ಶಿವಣ್ಣ

ಹಾಸನ: ರಾಜಕೀಯಕ್ಕೂ ನನಗೂ ಬಹಳ ದೂರದ ಅಂತರವಿದೆ. ರಾಜಕೀಯ ನಮಗೆ ಆಗಿಬರುವುದಿಲ್ಲ ಎಂದು ಹೇಳುವ ಮೂಲಕ ನಟ ಶಿವರಾಜ್‌ಕುಮಾರ್‍ ತಮ್ಮ ರಾಜಕೀಯ ಪ್ರವೇಶ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಹಾಸನದಲ್ಲಿ ಮಾತನಾಡಿದ ಶಿವಣ್ಣ ರಾಜಕೀಯಕ್ಕೆ ಬರುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಅಂತಹ ಇರಾದೆಯೂ ನನಗಿಲ್ಲ. ಇದು ಕೇವಲ ಗಾಳಿಮಾತಾಗಿದ್ದು ಇದರಲ್ಲಿ ಎಳ್ಳಷ್ಟೂ ವಾಸ್ತವಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ತಾಯಿ ನಿಧನಾನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂದಿ ಅವರು ಸಾಂತ್ವನ ಹೇಳಲೆಂದು ನಮ್ಮ ನಿವಾಸಕ್ಕ ಆಗಮಿಸಿದಾಗಿನಿಂದ ಇಂತಹ ಸುದ್ದಿಗಳು ಹರಡುತ್ತಿವೆ. ಇದರಲ್ಲಿ ಸತ್ಯಾಂಶ... Read More
ರಾಜಕುಮಾರನ ಶತಸಂಭ್ರಮ ಸಿನಿಮಾ 

ರಾಜಕುಮಾರನ ಶತಸಂಭ್ರಮ

ಬೆಂಗಳೂರು: ಕನ್ನಡ ಚಿತ್ರರಂಗದ ಮೆಗಾಹಿಟ್ ಚಿತ್ರ ಎನಿಸಿರುವ ಪುನೀತ್ ಅಭಿನಯದ ರಾಜಕುಮಾರ ಶತದಿನ ಪ್ರದರ್ಶನದ ಸಂಭ್ರಮದಲ್ಲಿ ಮುಳುಗಿದೆ. ವರ್ಷದ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಈವರೆಗಿನ ಹಿಟ್ ಚಿತ್ರಗಳಿಗೇ ಸೂಪರ್‍ ಹಿಟ್ ಎನಿಸಿರುವ ರಾಜಕುಮಾರನ ಶತಕದ ಓಟವನ್ನು ಅಭಿಮಾನಿಗಳು ನರ್ತಕಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ರಾಜ್ಯ 45 ಕೇಂದ್ರದಲ್ಲಿ ರಾಜಕುಮಾರ ಸಿನಿಮಾ ನೂರು ದಿನ ಓಡಿರುವುದು ಮತ್ತು ಇನ್ನು ಓಟ ಮುಂದುವರಿಸಿರುವುದು ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿತ್ತು. ಇದೇ ವೇಳೆ ಪವರ್‌ಸ್ಟಾರ್‍ ಪುನೀತ್ ಸೇರಿದಂತೆ ಬಹುತೇಕ ಚಿತ್ರತಂಡ ರಾಜಕುಮಾರನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿತ್ತು.ಪುನೀತ್ ರಾಜ್ ಕುಮಾರ್... Read More
ವೆಂಕಟನ ಹುಚ್ಚಾಟ: ಫೆನಾಯಿಲ್ ಕುಡಿದು ರಂಪಾಟ ಸಿನಿಮಾ 

ವೆಂಕಟನ ಹುಚ್ಚಾಟ: ಫೆನಾಯಿಲ್ ಕುಡಿದು ರಂಪಾಟ

ಬೆಂಗಳೂರು: ವಿವಾದವೇ ಬದುಕಾಗಿಸಿಕೊಂಡಿರುವ ನಟ ವೆಂಕಟ್ (ಹುಚ್ಚ ವೆಂಕಟ್) ಈ ಬಾರಿ ಪ್ರೀತಿಸಿದವರು ಕೈಕೊಟ್ಟರು ಎಂಬ ನೆಪ ನೀಡಿ ಫೆನಾಯಿಲ್ ಕುಡಿದು ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಸಂದೇಶ ಕಳಿಸಿದ್ದರು. ರಿಯಾಲಿಟಿ ಶೋನ ಸಹನಟಿ ಜತೆ ವೆಂಕಟ್ ಅವರಿಗೆ ಪ್ರೇಮಾಂಕುರವಾಗಿತ್ತು. ಆಕೆ ಮದುವೆಯಾಗಲು ಒಪ್ಪದ ಕಾರಣ, ಮನನೊಂದ ವೆಂಕಟ್, ‘ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ’ ಎಂದು ಕಾರಣ ಹೇಳಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. Read More
ದಾದಾ ಈಸ್ ‍ಬ್ಯಾಕ್‍ ಚಿತ್ರದ ಕಿಕ್‍ ಹಾಡು “ಓಪನ್‍’ ಸಿನಿಮಾ 

ದಾದಾ ಈಸ್ ‍ಬ್ಯಾಕ್‍ ಚಿತ್ರದ ಕಿಕ್‍ ಹಾಡು “ಓಪನ್‍’

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಮ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದರ ಸಾಲಿಗೆ ಈಗ ಮತ್ತೊಂದು ಚಿತ್ರವೂ ಸೇರುತ್ತಿದೆ. ಪ್ರಯೋಗಾತ್ಮಾಕ ಚಿತ್ರಗಳನ್ನು ನಿರ್ದೇಶಿಸಿರುವ ಗೊಂಬೆಗಳ ಲವ್‍ ಚಿತ್ರದ ಖ್ಯಾತಿಯ ಸಂತೋಷ್‍ ನಿರ್ದೇಶನದ “ದಾದಾ ಈಸ್‍ ಬ್ಯಾಕ್‍’’ ಚಿತ್ರ ಚಿತ್ರಮಂದಿರಗಳ ಪರದೆಯ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ಚಿತ್ರದ ಹಾಡುಗಳು ಈಗ ಬಿಡುಗಡೆಯಾಗಿವೆ. ಚಿತ್ರ ಬಿಡುಗಡೆಯಲ್ಲೂ ಪ್ರಯೋಗವನ್ನು ಮಾಡಿರುವ ಚಿತ್ರತಂಡ ಯುಟ್ಯೂಬ್ ‍ಮೂಲಕ ಚಿತ್ರ ಬಿಡುಗಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ “ಕಿಕ್‍’’ ಹಾಡುಗಳು ಸಾಲು ಸಾಲಾಗಿ ಬರುತ್ತಿವೆ. ದಾದಾ ಈಸ್‍ ಬ್ಯಾಕ್‍ನಲ್ಲಿಯೂ ಅದೇ... Read More
ಮೋದಿ ಭೇಟಿ ಮಾಡಿ ಚರ್ಚಿಸಿದ ಅಕ್ಷಯ್ ಕುಮಾರ್ ಸಿನಿಮಾ 

ಮೋದಿ ಭೇಟಿ ಮಾಡಿ ಚರ್ಚಿಸಿದ ಅಕ್ಷಯ್ ಕುಮಾರ್

ನವದೆಹಲಿ: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ತಮ್ಮ ಮುಂದಿನ ಸಿನೆಮಾದ ಶೀರ್ಷಿಕೆ ‘ಟಾಯ್ಲೆಟ್:ಏಕ್ ಪ್ರೇಮ್ ಕಥಾ’ ಪ್ರಧಾನಿ ನರೇಂದ್ರ ಮೋದಿ ಅವರ ಮುಖದಲ್ಲಿ ನಗು ಮೂಡಿಸಿತು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಕ್ಷಯ್ ಕುಮಾರ್ ಮಂಗಳವಾರ ಹೇಳಿದ್ದಾರೆ. ಮೋದಿ ಅವರನ್ನು ಭೇಟಿ ಮಾಡಿರುವುದರ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ “ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದೆ ಮತ್ತು ನನ್ನ ಮುಂದಿನ ಸಿನೆಮಾ ‘ಟಾಯ್ಲೆಟ್:ಏಕ್ ಪ್ರೇಮ್ ಕಥಾ’ ಬಗ್ಗೆ... Read More
ರಾಣಾಗೆ ಬಲಗಣ್ಣು ಕಾಣುವುದಿಲ್ಲ ಸಿನಿಮಾ 

ರಾಣಾಗೆ ಬಲಗಣ್ಣು ಕಾಣುವುದಿಲ್ಲ

 ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವನ ಪಾತ್ರದ ರಾಣಾ ದಗ್ಗು ಬಾಟಿ ಅವರಿಗೆ ಸಂಬಂಧ ಪಟ್ಟ ಆಸಕ್ತಿ ದಾಯಕ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಣ ದಗ್ಗುಬಾಟಿಗೆ  ಒಂದು ಕಣ್ಣು ಕಾಣುವುದಿಲ್ಲ ಎಂಬುದು ಹಳೇ ಸುದ್ದಿ. ‘ಬಾಹುಬಲಿ 2’ ಚಿತ್ರದ ಜತೆಗೆ ರಾಣಾ ಕಣ್ಣಿನ ವಿಷಯವೂ ವ್ಯಾಪಕವಾಗಿ ಹರಿದಾಡುತ್ತಿದೆ. ಮಾರ್ಚ್ 28, 2016 ರಂದು ನಡೆದ ಸಂದರ್ಶನವೊಂದರಲ್ಲಿ ರಾಣಾ ಹೇಳಿದ್ದ ವಿಷಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನನ್ನ ಒಂದು ಕಣ್ಣಿಗೆ ಮಾತ್ರ ದೃಷ್ಟಿ ಇದೆ. ಬಾಲ್ಯದಿಂದಲೇ ನನ್ನ ಬಲಗಣ್ಣಿಗೆ ದೃಷ್ಟಿಯಿಲ್ಲ. ಯಾರೋ... Read More
ಭೀಕರ ರಸ್ತೆ ಅಪಘಾತ-ನಟಿ ಸೋನಿಕಾ ಸಾವು ಸಿನಿಮಾ 

ಭೀಕರ ರಸ್ತೆ ಅಪಘಾತ-ನಟಿ ಸೋನಿಕಾ ಸಾವು

ಕೋಲ್ಕತಾ:  ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಟಿ, ರೂಪದರ್ಶಿ ಸೋನಿಕಾ ಚೌಹಾಣ್ ಮೃತಪಟ್ಟಿದ್ದಾರೆ.    ಕೋಲ್ಕತಾದ ರಶ್ಖೆಹಾಹಿ ಅವೆನ್ಯೂ ರಸ್ತೆ ಬಳಿ ಗೆಳೆಯ ಹಾಗೂ ನಟ ವಿಕ್ರಮ ಚಟರ್ಜಿ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.  ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಇಬ್ಬರನ್ನೂ ಕಾರಿನಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.  ಆದರೆ ಸೋನಿಕಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.  ವಿಕ್ರಮ ತಲೆಗೆ ಪೆಟ್ಟಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಶನಿವಾರ ಮುಂಜಾನೆ 5 ಗಂಟೆ ಸುಮಾರಿನಲ್ಲಿ ಅಪಘಾತವಾಗಿದ್ದು, ಟೊಯೋಟಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ... Read More
ಕಲ್ಪನೆಗೂ ಮಿರಿದ ಗ್ರಾಫಿಕ್ಸ್; ರಾಜಮೌಳಿ ಸಕ್ಸಸ್‍ ಸಿನಿಮಾ 

ಕಲ್ಪನೆಗೂ ಮಿರಿದ ಗ್ರಾಫಿಕ್ಸ್; ರಾಜಮೌಳಿ ಸಕ್ಸಸ್‍

ಹರಿ ಒಂದು ಚಿತ್ರ ಯಶಸ್ವಿಯಾಗಲು ಏನೇನು ಮಾಡಬೇಕು ಅದೆಲ್ಲವನ್ನೂ ಮಾಡಿದ್ದಾರೆ ನಿರ್ದೇಶಕ ಎಸ್.ಎಸ್. ರಾಜಮೌಳಿ. ಒಂದು ದೃಶ್ಯ ಕಾವ್ಯವನ್ನು ತೆರೆಯ ಮೇಲೆ ಬಿಡಿಸಲಿ ಐದು ವರ್ಷ ತೆಗೆದುಕೊಂಡಿದ್ದ ನಿರ್ದೇಶಕ ಕಳೆದ ಒಂದೂವರೆ ವರ್ಷದಿಂದ ಇಡೀ ದೇಶದ ಮುಂದೆ ಒಂದೇ ಒಂದು ಪ್ರಶ್ನೆ ಇಟ್ಟು ಉತ್ತರಕ್ಕಾಗಿ ಕಾಯುವಂತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದರು. ಬಾಹುಬಲಿಯನ್ನ ಕಟ್ಟಪ್ಪ ಏಕೆ ಕೊಂದ? ಬಾಹುಬಲಿ ದ ಬಿಗಿನಿಂಗ್‍ ನೋಡಿ ಬಂದಾಗಿನಿಂದ ಚಿತ್ರಪ್ರೇಮಿಗಳಿಗೆ ಕಾತರ, ಕುತೂಹಲ, ಆಸಕ್ತಿಯನ್ನು ಮೂಡಿಸುವಲ್ಲಿ ರಾಜಮೌಳಿ ಯಶಸ್ವಿಯಾಗಿದ್ದರು. ಅದನ್ನು ಈಗಲೂ ಹಿಡಿದಿಟ್ಟುಕೊಂಡಿದ್ದಾರೆ. ಇದರಲ್ಲಿಯೇ ರಾಜಮೌಳಿ ಚಿತ್ರವನ್ನು ಹಿಟ್‍ ಮಾಡಿಸಿದ್ದರು. ಅದನ್ನು... Read More
ತಲೆ ನುಣ್ಣಗಾಗಿದೆ, 10 ಲಕ್ಷ ರೂ. ಕೊಡ್ತೀರಾ? ಸಿನಿಮಾ 

ತಲೆ ನುಣ್ಣಗಾಗಿದೆ, 10 ಲಕ್ಷ ರೂ. ಕೊಡ್ತೀರಾ?

ನವದೆಹಲಿ: ಮಸೀದಿಗಳಲ್ಲಿ  ಧ್ವನಿವರ್ಧಕ ಬಳಕೆ ಕುರಿತು ತಮಗಾಗುತ್ತಿದ್ದ ಕಿರಿಕಿರಿಯ ಬಗ್ಗೆ ಗಾಯಕ ಸೋನು ನಿಗಮ್‍ ಟ್ವಿಟರ್‍ ಮೂಲಕ ಬೇಸರ ವ್ಯಕ್ತಪಡಿಸಿದ್ದರು.  ಇವರ ಟ್ವೀಟ್‍ಗೆ ಕಿಡಿಕಾರಿದ್ದ ಮೌಲ್ವಿಯೊಬ್ಬರು ಸೋನು ನಿಗಮ್ ತಲೆ ಬೋಳಿಸಿ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದಕ್ಕೆ ದಿಟ್ಟತನದ ಉತ್ತರ ನೀಡಿರುವ ಸೋನು ನಿಗಮ್‍, ಮುಸ್ಲಿಂ ವ್ಯಕ್ತಿಯಿಂದಲೇ ಖುದ್ದು ತಲೆ ಬೋಳಿಸಿಕೊಂಡಿದ್ದು, 10 ಲಕ್ಷ ರೂ. ಬಹುಮಾನವನ್ನು ತನಗಾಗಿ ಸಿದ್ಧಪಡಿಸುವಂತೆ ಮೌಲ್ವಿಗೆ ಕರೆ ನೀಡಿದ್ದಾರೆ.  “ಇಂದು ಮಧ್ಯಾಹ್ನ 2 ಗಂಟೆಗೆ ಆಲೀಮ್ ಹಕೀಮ್ ಅವರು... Read More