You are here
ಮಾರುತಿಯ ಹೊಸ `ಇಗ್ನಿಸ್‍’ ಕಾರು ಮಾರುಕಟ್ಟೆಗೆ

ಮಾರುತಿಯ ಹೊಸ `ಇಗ್ನಿಸ್‍’ ಕಾರು ಮಾರುಕಟ್ಟೆಗೆ

ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಾರುತಿ ಸುಜುಕಿ ಸಂಸ್ಥೆ (ಎಂಎಸ್‍ಐಎಲ್) `ನೆಕ್ಸಾ’ ಅವತರಣಿಕೆಯ ಮೂರನೇ ಮಾದರಿಯ ಕಾರು `ಇಗ್ನಿಸ್‍’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ 4.59 ಲಕ್ಷದಿಂದ 7.80 ಲಕ್ಷದವರಿಗಿದೆ.

ಸಣ್ಣ ಕಾರುಗಳ ಮಾರುಕಟ್ಟೆಯಲ್ಲಿ ನೆಕ್ಸಾ ಮಾರುತಿ ಸುಜುಕಿ ಸಂಸ್ಥೆಯ ಒಟ್ಟಾರೆ ಮಾರಾಟದಲ್ಲಿ ಶೇ.10ರಷ್ಟು ಪಾಲು ಹೊಂದಿದೆ. ಇದನ್ನು ಶೇ. 15ರಿಂದ 17ರಷ್ಟು ಹೆಚ್ಚಿಸುವ ಗುರಿ ಹೊಂದಿದೆ.

ಯುವ ಸಮುದಾಯ ಆಕರ್ಷಿಸುವ ವಿನ್ಯಾಸ ಅಲ್ಲದೇ ಆಂಡ್ರಾಯ್ಡ್‍ ಮೊಬೈಲ್‍ ಹಾಗೂ ಆಪಲ್‍ ಕಾರ್‍ ಪ್ಲೇ ಮೂಲಕ ಚಾಲನೆ ಮಾಡಬಹುದಾದ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಪೆಟ್ರೋಲ್‍ ಮತ್ತು ಡೀಸೆಲ್‍ ಎರಡೂ ಮಾದರಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿರುವ ಇಗ್ನಿಸ್‍ ಕಾರುಗಳಲ್ಲಿ `ಎಜಿಎಸ್‍’ ವ್ಯವಸ್ಥೆ ಇದೆ. ರಕ್ಷಣಾ ವ್ಯವಸ್ಥೆಯಲ್ಲೂ ಸಾಕಷ್ಟು ಗುಣಮಟ್ಟ ಉತ್ತಮವಾಗಿದೆ.

Related Articles