You are here
ಯುವತಿಗೆ ಅಂಬಾನಿ ನೀಡಿದ ಉತ್ತರ ಎಲ್ಲರಿಗೂ ಪಾಠ!

ಯುವತಿಗೆ ಅಂಬಾನಿ ನೀಡಿದ ಉತ್ತರ ಎಲ್ಲರಿಗೂ ಪಾಠ!

ನನ್ನ ಬಳಿ ಸೌಂದರ್ಯ ಇದೆ. ೧೦೦ ಕೋಟಿ ಆದಾಯ ಹೊಂದಿರುವ ವ್ಯಕ್ತಿಯನ್ನು ವರ್ಷದೊಳಗೆ ವಿವಾಹ ಆಗಬೇಕು. ಅದಕ್ಕೆ ಏನು ಮಾಡಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ಯುವತಿಯೊಬ್ಬಳು ಕೇಳಿದ ಪ್ರಶ್ನೆಗೆ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ನೀಡಿರುವ ಉತ್ತರ ಎಲ್ಲರೂ ಪಾಠದಂತಿದೆ. ‘ ಈಗ ನಾನು ಇಲ್ಲಿ ಹೇಳಲು ಹೊರಟಿರುವ ವಿಷಯ ನನ್ನ ಪ್ರಮಾಣಿಕ ಅನಿಸಿಕೆ.
ನನಗೀಗ ೨೫ ವರ್ಷ. ನಾನು ಅತ್ಯಂತ ಸುಂದರವಾಗಿದ್ದೇನೆ. ಉತ್ತಮ ಶೈಲಿ ಹಾಗೂ ಹವ್ಯಾಸ ಹೊಂದಿದ್ದೇನೆ. ನಾನೀಗ ಕನಿಷ್ಠ ೧೦೦ ಕೋಟಿ ರೂ. ಆದಾಯ ಇರುವ ವ್ಯಕ್ತಿಯನ್ನು ವಿವಾಹ ಆಗಲು ಬಯಸಿದ್ದೇನೆ. ನನ್ನ ಯೋಚನೆ ನಿಮಗೆ ಜೀರ್ಣಿಸಿಕೊಳ್ಳಲು ಕಷ್ಟ ಅನಿಸಬಹುದು. ಆದರೆ ಈಗಿನ ಕಾಲದಲ್ಲಿ ವಾರ್ಷಿಕ ೨ ಕೋಟಿ ಆದಾಯವನ್ನೂ ಕೂಡ ಮಧ್ಯಮ ವರ್ಗ ಎಂದು ಪರಿಗಣಿಸಲಾಗುತ್ತಿದೆ.
ನನ್ನ ಆಸೆ ದೊಡ್ಡದೆನಲ್ಲ. ಅಂತಹ ೧೦೦ ಕೋಟಿ ಆದಾಯ ಇರುವ ವ್ಯಕ್ತಿ ಯಾರಾದರೂ ಇದ್ದಾರಾ? ನನ್ನ ಪ್ರಶ್ನೆ ಏನೆಂದರೆ ೧೦೦ ಕೋಟಿ ಆದಾಯ ಇರುವ ನಿಮ್ಮಂತಹ ವ್ಯಕ್ತಿಯನ್ನು ಮದುವೆ ಆಗಲು ನಾನು ಏನು ಮಾಡಬೇಕು? ನನ್ನ ಪ್ರಕಾರ ೫೦ ಕೋಟಿಗಿಂತ ಹೆಚ್ಚು ಆದಾಯ ಇರೋನು ಶ್ರೀಮಂತ. ಆದರೆ ನ್ಯೂಯಾರ್ಕ್‌ನಲ್ಲಿ ಮನೆ ಮಾಡುತ್ತೀವಿ ಅಂದರೆ ೫೦ ಕೋಟಿ ಕೂಡ ಸಾಲದು.
ನನ್ನ ಪ್ರಶ್ನೆಗಳು
೧. ಅತ್ಯಂತ ಶ್ರೀಮಂತ ಬ್ರಹ್ಮಚಾರಿಗಳು ಎಲ್ಲಿರುತ್ತಾರೆ? (ಬಾರ್, ರೆಸ್ಟೋರೆಂಟ್, ಜಿಮ್‌ನಲ್ಲಾ)
೨. ಯಾವ ವಯಸ್ಸಿನವರನ್ನು ಗುರಿಯಾಗಿಸಿಕೊಳ್ಳಬೇಕು?
೩. ಯಾಕೆ ಶ್ರೀಮಂತರ ಪತ್ನಿಯರು ಸಾಧಾರಣ ಸುಂದರಿಯಾಗಿರುತ್ತಾರೆ?
೪. ನೀವು ಪತ್ನಿಯನ್ನು ಹೇಗೆ ನಿರ್ಧರಿಸುತ್ತೀರಿ? ಗರ್ಲ್‌ಫ್ರೆಂಡ್ ಯಾರನ್ನು ಪರಿಗಣಿಸುತ್ತೀರಿ?
-ಪೂಜಾ ಚೌಹಾಣ್
ಮುಖೇಶ್ ಅಂಬಾನಿ ನೀಡಿದ ಉತ್ತರ
ನಾನು (ಮುಖೇಶ್ ಅಂಬಾನಿ, ರಿಲಾಯನ್ಸ್ ಗ್ರೂಪ್) ನೀವು ಸಾಮಾಜಿಕ ಜಾಲ ತಾಣದಲ್ಲಿ ಮಾಡಿದ ಪೋಸ್ಟ್ ಗಮನಿಸಿದೆ.
ನಿಮ್ಮಂತೆಯೇ ಹಲವಾರು ಯುವತಿಯರು ಯೋಚಿಸುತ್ತಿರುತ್ತಾರೆ ಎಂದು ಭಾವಿಸಿದ್ದೇನೆ. ವೃತ್ತಿಪರ ಬಂಡವಾಳ ಹೂಡಿಕೆದಾರನಾಗಿ ನಿಮ್ಮ ಪರಿಸ್ಥಿತಿ ಅವಲೋಕಿಸಿ ಉತ್ತರ ಹೇಳುವ ಪ್ರಯತ್ನ ಮಾಡುತ್ತೇನೆ.
ನನ್ನ ಆದಾಯ ೧೦೦ ಕೋಟಿಗಿಂತ ಹೆಚ್ಚು. ಅದು ನಿಮ್ಮ ನಿರೀಕ್ಷೆಗಿಂತ ಹೆಚ್ಚು. ಆದರೂ ಈ ಪ್ರಶ್ನೆಗೆ ಉತ್ತರಿಸಿ ನನ್ನ ಸಮಯ ವ್ಯರ್ಥ ಮಾಡುತ್ತಿಲ್ಲ ಎಂದು ಅಂದುಕೊಂಡಿದ್ದೇನೆ. ಉದ್ಯಮಿಯಾಗಿ ನನ್ನ ಅಭಿಪ್ರಾಯ ಅಂದರೆ ನಿಮ್ಮನ್ನು ಮದುವೆ ಆಗುವ ನಿರ್ಧಾರ ತಪ್ಪು. ಉತ್ತರ ತುಂಬಾ ಸರಳ. ಅದನ್ನು ವಿವರಿಸುತ್ತೇನೆ.
ನಿಮ್ಮ ಪ್ರಕಾರ ಬ್ಯುಟಿ (ಸೌಂದರ್ಯ) ಮತ್ತು ಮನಿ (ಹಣ) ಪರಸ್ಪರ ಬದಲಾಯಿಸಿಕೊಳ್ಳೋದು ಅಂತ ಅರ್ಥ. ಒಬ್ಬ ವ್ಯಕ್ತಿ ತನ್ನ ಸೌಂದರ್ಯ ಕೊಟ್ಟರೆ ಅದಕ್ಕೆ ಬದಲಾಗಿ ಮತ್ತೊಬ್ಬ ಹಣ ನೀಡುವುದು. ಒಂದು ರೀತಿಯಲ್ಲಿ ನಿಮ್ಮ ವಾದ ನ್ಯಾಯಸಮ್ಮತವಾದುದೇ.
ನಿಜವಾದ ಸಮಸ್ಯೆ ಏನೆಂದರೆ ನಿಮ್ಮ ಸೌಂದರ್ಯ ಮಾಸುತ್ತದೆ. ಆದರೆ ನನ್ನ ಹಣ ಒಳ್ಳೆಯ ಉದ್ದೇಶದಿಂದ ಕೂಡಿದ್ದರೆ ಎಲ್ಲೂ ಹೋಗುವುದಿಲ್ಲ. ಆದ್ದರಿಂದ ನನ್ನ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ. ಆದರೆ ನಿಮ್ಮ ಸೌಂದರ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುವ ಬದಲು ಕುಂದುತ್ತಾ ಹೋಗುತ್ತದೆ.ಆರ್ಥಿಕ ತಜ್ಞರ ಪ್ರಕಾರ ಸೌಂದರ್ಯ ಪ್ರತಿವರ್ಷ ಸರವಳಿ (ಡಿಪ್ರಿಸಿಷೆನ್) ಎಂದು ಪರಿಗಣಿಸಲಾಗುತ್ತದೆ. ಆದರೆ ನಿನ್ನ ಆಸ್ತಿಯೂ ಹೌದು. ಅದರಲ್ಲೂ ೧೦ ವರ್ಷ ಆಗುವಷ್ಟರಲ್ಲಿ ಕಳೆದು ಹೋಗಿರುತ್ತದೆ. ಆದರೆ ನಾನು ವಾಲ್‌ಸ್ಟ್ರೀಟ್‌ನಲ್ಲಿ ಉದ್ಯಮದ ಜೊತೆ ಡೇಟಿಂಗ್ ಕೂಡ ಮಾಡಬಹುದು.
ನಿಮ್ಮ ಪ್ರಕಾರ ಹೇಳುವುದಾದರೆ ಕೊಡು-ಕೊಳ್ಳು ವ್ಯವಹಾರ ಆದಾಗ.
ಷೇರುಗಳನ್ನೂ ಅಷ್ಟೇ ದರ ಕುಸಿತ ಆದಾಗ ಮಾರಿಬಿಡುತ್ತೇವೆ. ಅದನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಮೂರ್ಖತನ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಅವರ ಪ್ರಕಾರ ಮದುವೆ ಅನ್ನೋದು ಮೂರ್ಖತನದು.
೧೦೦ ಕೋಟಿ ಆದಾಯ ಇರೋ ವ್ಯಕ್ತಿ ಖಂಡಿತ ಮೂರ್ಖನಾಗಿರುವುದಿಲ್ಲ. ನಮ್ಮಂತಹವರು ನಿಮ್ಮೊಂದಿಗೆ ಕೇವಲ ಸುತ್ತಾಡಬಹುದು. ಆದರೆ ಮದುವೆ ಆಗೋಕೆ ಸಾಧ್ಯವೇ ಇಲ್ಲ. ನನ್ನ ಸಲಹೆ ಅಂದರೆ ೧೦೦ ಕೋಟಿ ಆದಾಯ ಇರುವ ವ್ಯಕ್ತಿಗೆ ಹುಡುಕಾಟ ನಡೆಸುವುದಕ್ಕಿಂತ ನೀನೆ ೧೦೦ ಕೋಟಿ ಆದಾಯ ಗಳಿಸುವತ್ತ ಗಮನ ಹರಿಸು. ಆಗ ಸರಿಸಮನಾದ ವ್ಯಕ್ತಿಯನ್ನು ವಿವಾಹ ಆಗು.
ಈ ಸಲಹೆ ನಿಮಗೆ ಸಹಾಯ ಆಗಬಹುದು.
-ಮುಖೇಶ್ ಅಂಬಾನಿ

Related Articles

2 thoughts on “ಯುವತಿಗೆ ಅಂಬಾನಿ ನೀಡಿದ ಉತ್ತರ ಎಲ್ಲರಿಗೂ ಪಾಠ!

  1. S M Gurubasavaraja

    ಅನುಭವ ಇರುವಲ್ಲಿ ಅಮೃತ ಇರುತ್ತದೆ. ಅನುಭವದ ನುಡಿಗಳು ನಿಜಕ್ಕೂ ಭ್ರಮೆಯಲ್ಲಿರುವವರಿಗೆ ವಾಸ್ತವದ ಕಡೆಗೆ ಕರೆತರುವಂತಿವೆ.

Leave a Comment

2 × three =