You are here
ದೇವರೇ, ನಿಜಕ್ಕೂ ಇಂತಹ ಅಪ್ಪ-ಅಮ್ಮ ಯಾರಿಗೂ ಬೇಡ!

ದೇವರೇ, ನಿಜಕ್ಕೂ ಇಂತಹ ಅಪ್ಪ-ಅಮ್ಮ ಯಾರಿಗೂ ಬೇಡ!

ನಿಜಕ್ಕೂ ಇಂತಹ ಅಪ್ಪ-ಅಮ್ಮ ಯಾರಿಗೂ ಬೇಡ. ಸುದೀರ್ಘ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಯಾವೆಲ್ಲ ಪರಿ ಈ ಹೆಣ್ಣು ಮಗುವನ್ನು ಹಿಂಸಿಸಿದ್ದಾರೆ ಎಂದು ಮಾಧ್ಯಮ ಗಳಿಗೆ ವಿವರಿಸಿದಾಗ ಎಲ್ಲರೂ ಅಂದುಕೊಂಡಿದ್ದು ಹೀಗೆ.
ಇಷ್ಟಕ್ಕೂ ಅಪ್ಪನಿಗೆ ಆಸ್ಟ್ರೇಲಿಯಾ ನ್ಯಾಯಾಲಯ, ಈ ಇಬ್ಬರು ಗಂಡ ಹೆಂಡತಿಗೆ ಜೀವವಾಧಿ ಶಿಕ್ಷೆ ವಿಧಿಸಿದೆ. ೭೩ ಆರೋಪ ಹೊತ್ತಿರುವ ಗಂಡನಿಗೆ ೪೮ ವರ್ಷ ಹಾಗೂ ಹೆಂಡತಿಗೆ ೧೬ ವರ್ಷ ಶಿಕ್ಷೆ ವಿಧಿಸಿದ್ದು, ಕನಿಷ್ಟ ೩೬ ಮತ್ತು ೧೧ ವರ್ಷ ಶಿಕ್ಷೆ ಪೂರೈಸಿದ ನಂತರ ಪೆರೋಲ್ ಮೇಲೆ ಜಾಮೀನು ನೀಡಬಹುದು ಎಂದು ಸೂಚಿಸಿದೆ.
ಆರೋಪಿಗೆ ೫೯ ವರ್ಷ ಹಾಗೂ ಆತನ ಪತ್ನಿಗೆ ೪೫ ವರ್ಷ ಆಗಿರುವ ಕಾರಣ ಜಾಮೀನಿಗೆ ಅವಕಾಶ ನೀಡಿದೆ.
ಅಷ್ಟಕ್ಕೂ ನ್ಯಾಯಾಲಯ ಕಠಿಣ ಕ್ರಮ ಕೈಗೊಳ್ಳಲು ಗಂಡ-ಹೆಂಡತಿಯ ಸ್ವತಹ ೧೭ ವರ್ಷದ ಪುತ್ರಿ ತನ್ನನ್ನು ಪಾಪಕೂಪದಿಂದ ವಿಮುಕ್ತಿ ಮಾಡು ಎಂದು ರಕ್ತದಿಂದ ಬರೆದ ಪತ್ರ ಕಾರಣ.
ನಾವು ಹೆತ್ತ ಮಗಳು ನಮ್ಮಿಷ್ಟ ಎಂಬ ಉದ್ಧಟತನದ ಮಾತು ಹೇಳಿದ ಇವರಿಗೆ ಕ್ಷಮೆ ಕೂಡ ಕಡಿಮೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
೨೦೧೧ರಲ್ಲಿ ಮಗಳು (ಹೆಸರು ಮುಚ್ಚಿಡಲಾಗಿದೆ). ಮಗಳ ದೂರು ಆಧರಿಸಿ ಆಕೆಯ ಇಬ್ಬರೂ ಹೆತ್ತವರನ್ನು ೨ ವರ್ಷಗಳ ನಂತರ ಬಂಧಿಸಲಾಯಿತು.
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಮಗಳು ಅಪ್ಪ-ಅಮ್ಮನ ಪೈಶಾಚಿಕ ಕೃತ್ಯ ವಿವರಿಸಿದ್ದು ಹೀಗೆ.
೫ ವರ್ಷ ಮಗುವನ್ನು ಗಂಡ-ಹೆಂಡತಿ ಕೋಳಿ ಗೂಡು ಕೆಲವು ಬಾರಿ ಬಾಕ್ಸ್ ನೊಳಗೆ ಕೂಡಿ ಹಾಕುತ್ತಿದ್ದರು. ಓಡಿ ಹೋಗಬಹುದು ಎಂಬ ಕಾರಣಕ್ಕೆ ಕೆಲವೊಮ್ಮೆ ಮುಳ್ಳಿನ ತಂತಿಯಿಂದ ಕೈಕಾಲು ಕಟ್ಟಿ ಹಾಕಿ ಹೊರಗೆ ಹೋಗುತ್ತಿದ್ದರು.
ಕೆಲವೊಮ್ಮೆ ನೀರಿನ ಕೊಳದಲ್ಲಿ ಕೈಕಾಲು ಕಟ್ಟಿ ಕೂರಿಸು ತ್ತಿದ್ದರು. ತಾನೇ ಮಾಡಿದ ವಾಂತಿಯನ್ನು ಮತ್ತೆ ತಿನ್ನು ವಂತೆ ಹಿಂಸಿಸುತ್ತಿದ್ದರು. ಮುಳ್ಳಿನ ಟೇಬಲ್ ಮೇಲೆ ನಿಲ್ಲಿ ಸುವುದು, ಮೆಣಸಿನಕಾಯಿ ತಿನ್ನಿಸುವುದು ಮಾಡುತ್ತಿದ್ದರು.
ತಾಯಿ ಎರಡನೇ ಮಗುವಿಗೆ ಜನ್ಮ ನೀಡುವ ವೇಳೆ ಮಗಳ ಮೇಲೆ ಅಪ್ಪನೇ ಮೊದಲ ಬಾರಿ ಅತ್ಯಾಚಾರ ಎಸಗಿದ. ನಂತರ ಸತತ ೧೫ ವರ್ಷ ಈ ಕೃತ್ಯ ಮುಂದು ವರಿಸಿದ. ಈ ವಿಷಯ ಗೊತ್ತಾದರೂ ಅಮ್ಮ ಸಿಡಿದೇಳುವ ಬದಲು, ಅಪ್ಪನನ್ನು ತೃಪ್ತಿಪಡಿಸುವುದು ಹೇಗೆ ಎಂದು ಸಲಹೆ ನೀಡಿದರು. ನಗ್ನಳಾಗಿ ಲೈಂಗಿಕವಾಗಿ ಪ್ರಚೋದನೆ ನೀಡುವಂತೆ ನೃತ್ಯ ಮಾಡುವಂತೆ ಸೂಚಿಸುತ್ತಿದ್ದಳು.
ನನ್ನ ತಂದೆ ದೆವ್ವ. ಆತ ಮನುಷ್ಯನೇ ಅಲ್ಲ. ನನ್ನ ಹೆತ್ತ ವರೇ ನನ್ನ ಬಾಲ್ಯ ಕಸಿದುಕೊಂಡರು. ನಾನೆಂದು ಅದನ್ನು ಇನ್ನು ನೋಡಲು ಸಾಧ್ಯವಿಲ್ಲ ಎಂದು ಮಗಳು ಪತ್ರದಲ್ಲಿ ವಿವರಿಸಿದರು.
ಸಿಡ್ನಿಯ ಸೆಂಟ್ರಲ್ ಡಿಸ್ಟ್ರಿಕ್ಟ್ ನ್ಯಾಯಾಲಯ ವಿಚಾರಣೆ ನಂತರ ಆತಂಕ ವ್ಯಕ್ತಪಡಿಸಿದ್ದು. ಇಂತಹ ಕೃತ್ಯಗಳಿಗೆ ಜೀವಾವಧಿ ಶಿಕ್ಷೆಯೂ ಕಡಿಮೆ ಎಂದಿದೆ.

Related Articles

Leave a Comment

2 × four =