You are here
41,850 ಕಾರುಗಳ ಏರ್‍ ಬ್ಯಾಗ್‍ ಬದಲಿಗೆ ಹೋಂಡಾ

41,850 ಕಾರುಗಳ ಏರ್‍ ಬ್ಯಾಗ್‍ ಬದಲಿಗೆ ಹೋಂಡಾ

ಚೆನ್ನೈ: ಭಾರತದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ 41,580 ಕಾರುಗಳಲ್ಲಿ ದೋಷ ಕಂಡು ಬಂದಿದ್ದ ಏರ್‍ ಬ್ಯಾಗ್‍ಗಳನ್ನು ಬದಲಿ ವ್ಯವಸ್ಥೆ ಮಾಡಿಕೊಡಲು ಹೋಂಡಾ ಸಂಸ್ಥೆ ನಿರ್ಧರಿಸಿದೆ.

ಹೋಂಡಾ ಕಾರ್ಸ್‍ ಇಂಡಿಯಾ ಲಿಮಿಟೆಡ್‍ ಸಂಸ್ಥೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಸ್ಥೆಯ ಜಾಸ್‍, ಸಿಟಿ, ಸಿವಿಕ್‍ ಮತ್ತು ಅಕಾರ್ಡ್‍ ಕಾರುಗಳ ಮುಂದಿನ ಸೀಟುಗಳ ಏರ್‍ ಬ್ಯಾಗ್‍ಗಳಲ್ಲಿ ದೋಷ ಕಂಡು ಬಂದಿದ್ದು, ಅವುಗಳಿಗೆ ಯಾವುದೇ ಶುಲ್ಕ ವಿಧಿಸದೇ ಹೊಸ ಏರ್‍ ಬ್ಯಾಗ್‍ ಅಳವಡಿಸಿಕೊಡುವುದಾಗಿ ತಿಳಿಸಿದೆ.

2012ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ 7265 ಜಾಸ್‍ ಕಾರುಗಳು, ಸೆಡಾನ್ ಸಿಟಿಯ 32,456 ಮತ್ತು ಅಕಾರ್ಡ್‍ನ 1200 ಕಾರುಗಳ ಏರ್‍ ಬ್ಯಾಗ್‍ ಅಳವಡಿಕೆಯಲ್ಲಿ ದೋಷ ಕಂಡು ಬಂದಿತ್ತು.

Related Articles