You are here
ಸಾಧನೆಗೆ ಆದರ್ಶ ವ್ಯಕ್ತಿಗಳೇ ಪ್ರೇರಣೆ

ಸಾಧನೆಗೆ ಆದರ್ಶ ವ್ಯಕ್ತಿಗಳೇ ಪ್ರೇರಣೆ

ಅಶ್ವಿನಿ ಅಂಗಡಿ ಅಂಕಣ

ಬೆಳಕು-ಬೆರಗು

Ashwini.angadi0@gmail.com

ದೂರವಾಣಿ: 080-28535559

 

ಬಾಲ್ಯದಿಂದ ಒಂದು ಕನಸನ್ನು ಕಂಡು ಮತ್ತು ಎಳೇ ವಯಸ್ಸಿನಲ್ಲಿಯೇ ಅದನ್ನು ಸಾಕಾರ ಮಾಡಿಕೊಳ್ಳುವ ಪ್ರಯತ್ನ ಮಾಡಿ ಒಂದು ಹಂತಕ್ಕೆ ನನಸು ಮಾಡಿಕೊಂಡ ಅನೇಕ ಸಾಧಕರನ್ನು ನಾವು ಗಮನಿಸುತ್ತೇವೆ. ವಿಜ್ಞಾನಿ ಆಗಲು ಬಯಸುವವರು ತಮ್ಮ ಶಾಲಾ ಪಠ್ಯಕ್ರಮಗಳಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟು ಡಿಗ್ರಿಗಳಲ್ಲಿ ಅವರ ಕನಸಿನ ವಿಷಯವನ್ನೇ ತಗೆದುಕೊಂಡು ಹೆಚ್ಚು ಅಧ್ಯಯನ ಮಾಡಿ ಅದರಲ್ಲೇ ಸಾಧನೆ ಮಾಡುತ್ತಾರೆ. ಒಬ್ಬ ಸಂಗೀತಗಾರನಾಗಬೇಕಾಗಿದ್ದರೂ ಅಷ್ಟೇ ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿ ದೊಡ್ಡ ಕಲೆಗಾರ ಎನಿಸಿಕೊಳ್ಳುತ್ತಾನೆ.

ಒಬ್ಬೊಬ್ಬ ಸಾಧಕನೂ ಒಬ್ಬ ಆದರ್ಶ ವ್ಯಕ್ತಿಯಿಂದ ಪ್ರಭಾವಗೊಂಡಿರುವುದನ್ನೂ ಸಹ ನಾವು ಗಮನಿಸಿರುತ್ತೇವೆ. ಉದಾಹರಣೆಗೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿ ತಮ್ಮ ಬದುಕಿನ ಕೊನೆಯಲ್ಲಿ ಮನೆಯವರನ್ನು ಕಂಡು ಅಲ್ಲಿಯೇ ಸಾಯೋದು ಎಂದು ತೀರ್ಮಾನಿಸಿ ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದಾಗ ರೈಲ್ವೆ platformನಲ್ಲಿ ಮಾರುತ್ತಿದ್ದ ಪುಸ್ತಕಗಳಲ್ಲಿ ಸ್ವಾಮಿ ವಿವೇಕಾನಂದರ “call to the nation”ಎಂಬ ಪುಸ್ತಕವನ್ನು ಕೊಂಡುಕೊಂಡರು. ತನ್ನ ಕೊನೆಯ ಕ್ಷಣವನ್ನು ಕೊಂಚ ಜ್ಞಾನವನ್ನು ಪಡೆಯುವುದರ ಮೂಲಕ ಕಳೆಯೋಣವೆಂದು ಮನಸ್ಸಿನಲ್ಲಿ ಭಾವಿಸಿದರು. 

ಅವರು ಆ ಪುಸ್ತಕದ 2ನೆ ಪುಟ ಓದಿ ಮುಗಿಸುವುದರ ಮೊದಲೇ ಅಲ್ಲಿಗೆ ಅನೇಕ ರೈಲುಗಳು ಬಂದು ಹೋಗಿದ್ದವು. ಆದರೆ ಅಣ್ಣಾ ಹಜಾರೆಗೆ ಆ ರೈಲುಗಳ ಬಗ್ಗೆ ಗಮನವೇ ಇಲ್ಲ. ಇಡೀ ಪುಸ್ತಕವನ್ನು ಕುಳಿತು ಓದಿದರು. ಓದುತ್ತಾ ಓದುತ್ತಾ ಬದುಕಿನ ಆಸೆ ಹೆಚ್ಚಿತು. ಸಮಾಜದ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಹುಮ್ಮಸ್ಸನ್ನು ಪಡೆದುಕೊಂಡರು. ಹೀಗಾಗಿ ನಮ್ಮ ದೇಶದಲ್ಲಿ ಹೆಚ್ಚಿದ್ದ ಭ್ರಷ್ಟಾಚಾರದ ವಿರುದ್ದ ದ್ವನಿ ಎತ್ತಿ ತನ್ನ ಪ್ರಾಣವನ್ನು ಲೆಕ್ಕಿಸದೇ ಹೋರಾಡಿದರು. ಅಷ್ಟೇ ಅಲ್ಲದೇ  ತಮ್ಮ ಹಳ್ಳಿಯಲ್ಲಿ ಬಾರ್‌ಗಳನ್ನು ಮುಚ್ಚಿಸುವುದು, ತಂಬಾಕು ಸೇವನೆಯ ವಿರುದ್ಧ ಹೋರಾಟವೇ ಇವರು ಕೈಗೊಂಡ ಮೊದಲ ಸಾಮಾಜಿಕ ಕಾರ್ಯವೆನ್ನಬಹುದು.

ಇವರೇನು ಬಾಲ್ಯದಿಂದ ಸಾಮಾಜಿಕ ಹೋರಾಟಗಾರರಾಗುವ ಕನಸ್ಸು ಕಂಡಿರಲಿಲ್ಲ. ಅವರ ಆರಂಭದ ದಿನಗಳೇನು ಅತ್ಯಂತ ಸುಖಕರವಾಗಿರಲಿಲ್ಲ ಒಬ್ಬ ಸಾಮಾನ್ಯ ಮನೆ ಕೆಲಸಗಾರಳ ಮಗನಾಗಿ, ತಾನು ಕೂಡ ಎಳೇ ವಯಸ್ಸಿನಲ್ಲಿ ಹೂ ಮಾರಾಟಗಾರನಾಗಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಹೀಗಾಗಿ ತಮ್ಮ ಬದುಕಿನ ಮೊದಲ ಹಂತದಲ್ಲಿ ಸಾಮಾಜಿಕ ಹೋರಾಟದ ಯಾವ ಕನಸನ್ನು ಕಂಡಿರಲಿಲ್ಲ ಏಕೆಂದರೆ ತಮ್ಮ ಕುಟುಂಬದ ಸಮಸ್ಯೆಯೇ ದೊಡ್ಡದಾಗಿತ್ತು ಅದಕ್ಕಾಗಿಯೇ ಅವರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಆದರೆ ತಮ್ಮ ಆದರ್ಶ ವ್ಯಕ್ತಿಯನ್ನು ಸರಿಯಾಗಿ ಅನುಸರಿಸಿದರು ಮತ್ತು ಅವರ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿದ್ದರಿಂದ icon of anti-curruption movment ಎಂಬ ಬಿರುದನ್ನು ಪಡೆದು ಅನೇಕರಿಗೆ ಸ್ಫೂರ್ತಿಯಾದರು. 

ನಾನು ಕೂಡ ಆರಂಭದಲ್ಲಿ ಕೈತುಂಬಾ ಹಣ ಸಂಬಳ ಕೊಡುವ ಒಂದು ದೊಡ್ಡ ಕಾರ್ಪೋರೇಟ್ ಕಂಪನಿಯಲ್ಲಿ   ಕೆಲಸ ಮಾಡಬೇಕೆಂಬ ಮಹಾನ್  ಕನಸ್ಸನ್ನು ಕಂಡಿದ್ದೆ ಆದರೆ ವಿಕಲ ಚೇತನರ ಏಳಿಗೆಗಾಗಿ ಹೋರಾಡುವುದರ ಮೂಲಕ ಕೊಂಚ ಮಟ್ಟಿಗಾದರು ನನ್ನನು ನಾನು ಸಮಾಜಕ್ಕೆ ಅರ್ಪಣೆ ಮಾಡಿಕೊಂಡಿದ್ದೇನೆಂದರೆ ಇದಕ್ಕೆ ಆದರ್ಶ ತುಂಬಿದವರು ಇಬ್ಬರು ವ್ಯಕ್ತಿಗಳು-

ಸೇವೆ ಮತ್ತು ತ್ಯಾಗಗಳ ಮೂಲಕ ಜಗತ್ತನ್ನಲ್ಲಿಯೇ ಅನೇಕರಿಗೆ ಆದರ್ಶವಾಗಿರುವ, “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಿದಿರಿ” ಎಂಬ ಸಿಂಹ ವಾಣಿ ಮೂಲಕ ಭಾರತಿಯರನ್ನು ಎಚ್ಚರಿಸಿದ ನನ್ನ ನೆಚ್ಚಿನ ನಾಯಕ, ಸ್ವಾಮಿ ವಿವೇಕಾನಂದರು. ಇವರ ಪುಸ್ತಕ ’ಕೊಲಂಬೋದಿಂದ ಆಲ್ಮೋರಕ್ಕೆ’ ಇದರಿಂದ ಭಾರತಕ್ಕೋಸ್ಕರ ಕೆಲಸ ಮಾಡುವ ಕಿಚ್ಚು ಎದ್ದಿತು, ವಿದೇಶದಲ್ಲಿಯೂ ಭಾರತ ಸಂಸ್ಕ್ರತಿಯನ್ನು ಪ್ರೀತಿಸುವ, ಗೌರವಿಸುವ ಹಾಗೂ ಕಾಪಾಡಿಕೊಳ್ಳುವುದರ ಮೂಲಕ ನಮ್ಮ ಹಿರಿಮೆಯನ್ನು ವಿದೇಶೀಯರ ಮದ್ಯದಲ್ಲಿ ಹೆಚ್ಚಿಸಿಕೊಳ್ಳುವ ಹಟ ಮನಸ್ಸಿನಲ್ಲಿ ಬೇರೂರಿತು. ಇದಕ್ಕೆ ಉದಾಹರಣೆಯಾಗಿ ವಿಶ್ವ ಸಂಸ್ಥೆಯ ಪ್ರಶಸ್ತಿ ಸ್ವೀಕರಿಸುವ ಸಂಧರ್ಭದಲ್ಲಿ ಭಾರತೀಯ ಸಾಂಸ್ಕೃತಿಕ ಉಡುಪಾದ ಸೀರೆಯನ್ನು ಧರಿಸಿ ಮತ್ತು ಭಾರತದ ಬಗ್ಗೆ ಸಕರಾತ್ಮಕವಾಗಿ ಭಾಷಣ ಮಾಡಿದೆ. ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಅವರು ಕೈಗಳನ್ನು ಜೋಡಿಸಿ ನನಗೆ ನಮಸ್ಕಾರ ಮಾಡಿ ಪ್ರಶಂಸಿದರು ಹಾಗೂ ಬ್ರಿಟನ್ನಿನ ರಾಣಿ ಎಲೆಜಬೆತ್ ಅವರು ನನ್ನ ಸಂಸ್ಕಾರವನ್ನು ಕಂಡು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

“they alone live who live for others and rest are more dead than alive”. ಅಂದರೆ ಯಾರು ಇತರರಿಗೋಸ್ಕರ ಬದುಕಿರುತ್ತಾರೋ ಅವರು ಮಾತ್ರ ಬದುಕಿದ್ದ ಹಾಗೆ, ಮಿಕ್ಕವರೆಲ್ಲಾ ಬದುಕಿದ್ದು ಸತ್ತ ಹಾಗೆ ಎಂಬ ಸುಭಾಷಿತದಿಂದ ಹಣ ಸಂಪಾದನೆ ಮಾಡುವ ಕಾರ್ಪೋರೇಟ್ ಕಂಪನಿಯ ಕನಸು ಬಿಟ್ಟು ವಿಕಲ ಚೇತನರ ಕಲ್ಯಾಣ ಕ್ಷೇತ್ರಕ್ಕೆ ಇಳಿದೆ.

ಐರ್ಲೆಂಡಿನಲ್ಲಿ ಹುಟ್ಟಿ ಬೆಳೆದು, ಭಾರತಕ್ಕೆ ಬಂದು ಈ ದೇಶದ ಸಂಸ್ಕ್ರತಿಯನ್ನು ಪ್ರೀತಿಯಿಂದ ತನ್ನ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ದೇಶದ ರೋಗಿಗಳ ಸೇವೆ ಮಾಡುವುದರ ಮೂಲಕ ಭಾರತ ಮಾತೆಗೆ ತನ್ನ್ನನು ತಾನು ಅರ್ಪಿಸಿಕೊಂಡ ಸೋದರಿ ನಿವೇದೀತ ನನ್ನ ಮತ್ತೊಬ್ಬ ನೆಚ್ಚಿನ ನಾಯಕಿ ಹಾಗೂ ಆದರ್ಶ ವ್ಯಕ್ತಿಯಾಗಿದ್ದಾರೆ.

ಇವರಿಬ್ಬರೂ ಹಾಕಿ ಕೊಟ್ಟ ಆದರ್ಶವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿ ಭಾರತ ಮಾತೆಗೆ ಸ್ವಲ್ಪಮಟ್ಟಿಗಾದರೂ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ನನ್ನ ಹೋರಾಡ ಮುಂದುವರಿದಿದೆ. ಇನ್ನು ಮುಂದೆಯೂ ಅದು ಹೀಗೆಯೇ ಮುಂದುವರಿಯುತ್ತದೆ ಎಂಬ ಭರವಸೆ ನನಗಿದೆ.

 

Related Articles