You are here
ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ: ನಿತೀಶ್ ಕುಮಾರ್

ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ: ನಿತೀಶ್ ಕುಮಾರ್

ನವದೆಹಲಿ: ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿರೋಧಪಕ್ಷಗಳ ಒಗ್ಗಟ್ಟು ಹಾಗೆಯೇ ಇದೆ ಎಂದು ಸ್ಪಷ್ಟಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರನ್ನು ಭೇಟಿ ಮಾಡುವ ಗೌರವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದಾಗಿ ತಿಳಿಸಿದ್ದಾರೆ.

“ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ವಿಪಕ್ಷಗಳಲ್ಲಿ ಒಗ್ಗಟ್ಟಿದೆ” ಎಂದು ಪ್ರಧಾನಿಯವರನ್ನು ಭೇಟಿ ಮಾಡಿದ ನಂತರ ನಿತೀಶ್ ಕುಮಾರ್ ಮಾಧ್ಯಮಗಳಿಗೆ ಹೇಳಿದ್ದಾರೆ.

ವಿರೋಧ ಪಕ್ಷಗಳ ನಾಯಕರಿಗೆ ಸೋನಿಯಾ ಗಾಂಧಿ ಅವರು ಆಯೋಜಿಸಿದ್ದ ಔತಣಕೂಟದ ಜೊತೆಗೆ, ಪ್ರಧಾನ ಮಂತ್ರಿಯವರು ಆಯೋಜಿಸಿದ್ದ ಔತಣಕೂಟಕ್ಕೆ ಹೋಲಿಸುವುದು ಸರಿಯಲ್ಲ ಎಂದಿರುವ ಜೆಡಿಯು ಮುಖಂಡ ವಿಪಕ್ಷಗಳ ಸಭೆಗೆ ಸಂಯುಕ್ತ  ಜನತಾದಳದ ಮುಖಂಡ ಶರದ್ ಯಾದವ್ ಭೇಟಿ ನೀಡಿದ್ದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

“ಮಾರಿಷಸ್ ನ ಅರ್ಧದಷ್ಟು ಜನಸಂಖ್ಯೆ ಬಿಹಾರ ಮೂಲದವರು. ಮಾರಿಷಸ್ ಜೊತೆಗೆ ನಮಗೆ ಭಾವನಾತ್ಮಕ ಸಂಬಂಧ ಇದೆ ಆದುದರಿಂದ ಈ ಆಹ್ವಾನ ಒಪ್ಪಿಕೊಳ್ಳುವುದು ಸರಿ ಎಂದೆನಿಸಿತು” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. 

ಬಿಹಾರಕ್ಕೆ ವಿಶೇಷ ಅನುದಾನ ನೀಡಲು ಕೋರಿ ಪತ್ರವನ್ನು ಪ್ರಧಾನಿ ಅವರಿಗೆ ನಿತೀಶ್ ನೀಡಿದ್ದಾರೆ. “ನಮಗೆ ಜನಾದೇಶ ಇದೆ. ನಮ್ಮಲ್ಲಿ ಮಹಾಘಟಬಂಧನ ಇದೆ. ಕೇಂದ್ರದ ಬಳಿ ರಾಜ್ಯದ ಸಮಸ್ಯೆಗಳನ್ನು ಎತ್ತುವುದು ನಮ್ಮ ಕರ್ತವ್ಯ” ಎಂದು ಕೂಡ ಅವರು ಹೇಳಿದ್ದಾರೆ. 
 

Related Articles