You are here
ಉಪ್ಪಿ ಮಾಡಲಿದ್ದಾರಾ ಬಿಎಸ್‌ವೈ ಪಾತ್ರ?

ಉಪ್ಪಿ ಮಾಡಲಿದ್ದಾರಾ ಬಿಎಸ್‌ವೈ ಪಾತ್ರ?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಮತಕ್ಷೇತ್ರಗಳಲ್ಲಷ್ಟೇ ಅಲ್ಲ ಬೆಳ್ಳಿ ಪರದೆ ಮೇಲೆ ಸಹ ಅನಾವರಣಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೀವನ ಕುರಿತ ಭೂಮಿಪುತ್ರ ಚಿತ್ರ ನಿರ್ಮಾಣದ ಘೋಷಣೆಯ ಬೆನ್ನಿಗೆ ಬಿಜೆಪಿ ರಾಜ್ಯಾಧಕ್ಷ ಯಡಿಯೂರಪ್ಪ ಅವರ ಕುರಿತಾದ ಚಿತ್ರ ಮೂಡಿಬರುವ ಸೂಚನೆ ಲಭ್ಯವಾಗಿದೆ.
ಖ್ಯಾತ ನಿರ್ದೇಶಕ ಎಂ.ಎಸ್ ರಮೇಶ್ ಅವರ ನಿರ್ದೇಶನದಲ್ಲಿ ಬಿಎಸ್ ವೈ ಅವರ ಚಿತ್ರ ಮೂಡಿ ಬರಲಿದೆ ಎಂದು ಮೂಲಗಳು ತಿಳಿಸಿವೆ, ಈ ಚಿತ್ರಕ್ಕೆ ನೇಗಿಲ ಯೋಗಿ ಹಾಗೂ ಮಣ್ಣಿನ ಮಗ ಎಂಬ ಟೈಟಲ್ ನೋಂದಾಣಿ ಮಾಡಲಾಗಿದ್ದು ಇದರಲ್ಲಿ ಯಾವುದು ಅಂತಿಮ ಎಂಬುವುದು ಇನ್ನು ತೀರ್ಮಾನವಾಗಿಲ್ಲ.
ನಂಬಲಾರ್ಹ ಮೂಲಗಳ ಪ್ರಕಾರ ರಿಯಲ್ ಸ್ಟಾರ್‍ ಉಪೇಂದ್ರ ಬಿಎಸ್‌ವೈ ಪಾತ್ರ ನಿರ್ವಹಿಸುವ ಸಾಧ್ಯತೆಗಳಿವೆ.

Related Articles