You are here
ವೆಂಕಟನ ಹುಚ್ಚಾಟ: ಫೆನಾಯಿಲ್ ಕುಡಿದು ರಂಪಾಟ

ವೆಂಕಟನ ಹುಚ್ಚಾಟ: ಫೆನಾಯಿಲ್ ಕುಡಿದು ರಂಪಾಟ

ಬೆಂಗಳೂರು: ವಿವಾದವೇ ಬದುಕಾಗಿಸಿಕೊಂಡಿರುವ ನಟ ವೆಂಕಟ್ (ಹುಚ್ಚ ವೆಂಕಟ್) ಈ ಬಾರಿ ಪ್ರೀತಿಸಿದವರು ಕೈಕೊಟ್ಟರು ಎಂಬ ನೆಪ ನೀಡಿ ಫೆನಾಯಿಲ್ ಕುಡಿದು ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಸಂದೇಶ ಕಳಿಸಿದ್ದರು. ರಿಯಾಲಿಟಿ ಶೋನ ಸಹನಟಿ ಜತೆ ವೆಂಕಟ್ ಅವರಿಗೆ ಪ್ರೇಮಾಂಕುರವಾಗಿತ್ತು. ಆಕೆ ಮದುವೆಯಾಗಲು ಒಪ್ಪದ ಕಾರಣ, ಮನನೊಂದ ವೆಂಕಟ್, ‘ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ’ ಎಂದು ಕಾರಣ ಹೇಳಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Related Articles