You are here
ರಾಜಕುಮಾರನ ಶತಸಂಭ್ರಮ

ರಾಜಕುಮಾರನ ಶತಸಂಭ್ರಮ

ಬೆಂಗಳೂರು: ಕನ್ನಡ ಚಿತ್ರರಂಗದ ಮೆಗಾಹಿಟ್ ಚಿತ್ರ ಎನಿಸಿರುವ ಪುನೀತ್ ಅಭಿನಯದ ರಾಜಕುಮಾರ ಶತದಿನ ಪ್ರದರ್ಶನದ ಸಂಭ್ರಮದಲ್ಲಿ ಮುಳುಗಿದೆ. ವರ್ಷದ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಈವರೆಗಿನ ಹಿಟ್ ಚಿತ್ರಗಳಿಗೇ ಸೂಪರ್‍ ಹಿಟ್ ಎನಿಸಿರುವ ರಾಜಕುಮಾರನ ಶತಕದ ಓಟವನ್ನು ಅಭಿಮಾನಿಗಳು ನರ್ತಕಿ ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.
ರಾಜ್ಯ 45 ಕೇಂದ್ರದಲ್ಲಿ ರಾಜಕುಮಾರ ಸಿನಿಮಾ ನೂರು ದಿನ ಓಡಿರುವುದು ಮತ್ತು ಇನ್ನು ಓಟ ಮುಂದುವರಿಸಿರುವುದು ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿತ್ತು.
ಇದೇ ವೇಳೆ ಪವರ್‌ಸ್ಟಾರ್‍ ಪುನೀತ್ ಸೇರಿದಂತೆ ಬಹುತೇಕ ಚಿತ್ರತಂಡ ರಾಜಕುಮಾರನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿತ್ತು.ಪುನೀತ್ ರಾಜ್ ಕುಮಾರ್ ಮಾತನಾಡಿ ಸಿನಿಮಾ 100ನೇ ದಿನ ಪೂರೈಸಿರೋದು ಖುಷಿ ತಂದಿದೆ. ಹಾಗೇ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತೇನೆ ಎಂದರು.

Related Articles