You are here
ಅಯ್ಯಪ್ಪನ ಹುಂಡಿಯಲ್ಲಿ ಪಾಕ್ ನೋಟು!

ಅಯ್ಯಪ್ಪನ ಹುಂಡಿಯಲ್ಲಿ ಪಾಕ್ ನೋಟು!

ತಿರುವನಂತಪುರಂ: ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ನಾನಾ ಕಡೆಗಳಿಂದ ಭಕ್ತರು ಬರುವುದು ಹೊಸ ವಿಯವೇಲ್ಲ. ಹಾಗೆ ಬರುವ ಭಕ್ತರು ಕಾಣಿಕೆ ಅರ್ಪಿಸುವುದೂ ಅಪರೂಪವೇನಲ್ಲ. ಆದರೆ ಈಗ ಅಯ್ಯಪ್ಪ ಕಾಣಿಕೆ ಹುಂಡಿಯಲ್ಲಿ ಪಾಕಿಸ್ತಾನಿ ನೋಟು ಸಿಕ್ಕಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಅಯ್ಯಪ್ಪನ ಕಾಣಿಕ ಹುಂಡಿಯಲ್ಲಿ ಪಾಕಿಸ್ತಾನದ ೨೦ ರೂಪಾಯಿ ನೋಟು ಸಿಕ್ಕಿದ್ದು, ಅಧಿಕಾರಿಗಳು ಇದರ ಮಾಲಿಕನ ಜಾಡು ಹಿಡಿಯುವಲ್ಲಿ ಕಾರ್‍ಯೋನ್ಮುಖರಾಗಿದ್ದಾರೆ. ಹುಂಡಿಯಲ್ಲಿ ಈ ರೀತಿ ಪಾಕಿಸ್ತಾನಿ ನೋಟು ಸಿಕ್ಕಿರುವುದು ಇದೇ ಮೊದಲಾಗಿದೆ.
ಪಾಕಿಸ್ತಾನದಿಂದ ಇಲ್ಲಿಗೆ ಬಂದು ಕಾಣಿಕೆ ಹಾಕುವುದು ಇಂದಿನ ಪರಿಸ್ಥಿತಿಯಲ್ಲಿ ಊಹಿಸುವುದು ಕಷ್ಟ. ಹಾಗಿದ್ದರೆ ಪಾಕಿಸ್ತಾನಿ ನೋಟು ಭಾರತದಲ್ಲಿ ಹೇಗೆ ಚಲಾವಣೆಗೆ ಬಂತು ಎಂಬುದು ತನಿಖಾಧಿಕಾರಿಗಳ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಬಹುಶಃ ಇದು ಯಾರೋ ಕಿಡಿಗೇಡಿಗಳ ಕೃತ್ಯ ಇರಬಹುದಾದರೂ ಹಾಗೆಂದು ಸುಮ್ಮನಾಗಲು ಬಾರದು. ಈ ಕಾರಣಕ್ಕೆ ಕೂಲಂಕಷ ತನಿಖಗೆ ಅಧಿಕಾರಿಗಳು ಮುಂದಾಗಿದ್ದಾರೆ.

Related Articles