You are here
ರಾಜಕೀಯದ ಗೊಡವೆ ನನಗಿಲ್ಲ: ಶಿವಣ್ಣ

ರಾಜಕೀಯದ ಗೊಡವೆ ನನಗಿಲ್ಲ: ಶಿವಣ್ಣ

ಹಾಸನ: ರಾಜಕೀಯಕ್ಕೂ ನನಗೂ ಬಹಳ ದೂರದ ಅಂತರವಿದೆ. ರಾಜಕೀಯ ನಮಗೆ ಆಗಿಬರುವುದಿಲ್ಲ ಎಂದು ಹೇಳುವ ಮೂಲಕ ನಟ ಶಿವರಾಜ್‌ಕುಮಾರ್‍ ತಮ್ಮ ರಾಜಕೀಯ ಪ್ರವೇಶ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಹಾಸನದಲ್ಲಿ ಮಾತನಾಡಿದ ಶಿವಣ್ಣ ರಾಜಕೀಯಕ್ಕೆ ಬರುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಅಂತಹ ಇರಾದೆಯೂ ನನಗಿಲ್ಲ. ಇದು ಕೇವಲ ಗಾಳಿಮಾತಾಗಿದ್ದು ಇದರಲ್ಲಿ ಎಳ್ಳಷ್ಟೂ ವಾಸ್ತವಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ತಾಯಿ ನಿಧನಾನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂದಿ ಅವರು ಸಾಂತ್ವನ ಹೇಳಲೆಂದು ನಮ್ಮ ನಿವಾಸಕ್ಕ ಆಗಮಿಸಿದಾಗಿನಿಂದ ಇಂತಹ ಸುದ್ದಿಗಳು ಹರಡುತ್ತಿವೆ. ಇದರಲ್ಲಿ ಸತ್ಯಾಂಶ ಇಲ್ಲ ಎಂದು ಶಿವಣ್ಣ ಹೇಳಿದರು.
ಇದೇ ವೇಳೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಮ್ಮ ಪತ್ನಿ ಗೀತಾ ಅವರಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಹುಮ್ಮಸ್ಸು ಇದ್ದು, ಅವರು ಮಾತ್ರ ರಾಜಕೀಯದಲ್ಲಿ ಉಳಿಯುತ್ತಾರೆ ಎಂದು ಶಿವಣ್ಣ ತಿಳಿಸಿದರು.

Related Articles