You are here
ರಾಘವೇಶ್ವರ ಶ್ರೀ ಚಾತುರ್ಮಾಸ್ಯ

ರಾಘವೇಶ್ವರ ಶ್ರೀ ಚಾತುರ್ಮಾಸ್ಯ

ಬೆಂಗಳೂರು: ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳ 24ನೇ ಚಾತುರ್ಮಾಸ್ಯವನ್ನು ಅಭಯಚಾತುರ್ಮಾಸ್ಯವಾಗಿ ಅಚರಿಸಲಾಗುತ್ತಿದ್ದು, ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ಭಾನುವಾರ ವ್ರತ ಸಂಕಲ್ಪದೊಂದಿಗೆ ಶುಭಾರಂಭಗೊಳ್ಳಲಿದೆ.
ಬೆಳಗ್ಗೆ 8:00ಗೆ ಶ್ರೀಕಾರಾರ್ಚಿತ ಪೂಜೆ ನಡೆಯಲಿದ್ದು, 9:00ಕ್ಕೆ ಪರಂಪರಾಗತ ಧಾರ್ಮಿಕ ವಿಧಿವಿಧಾನದಂತೆ ವ್ಯಾಸದಿಪೂಜೆ ನಡೆಸಿ, ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಶ್ರೀಗಳು ಕೈಗೊಳ್ಳಲಿದ್ದಾರೆ.
ಮದ್ಯಾಹ್ನ 12:00 ಗೆ ತೀರ್ಥ ಪ್ರಸಾದ ಅನುಗ್ರಹ ಹಾಗೂ ಫಲಸಮರ್ಪಣೆ ನಡೆಯಲಿದೆ. ಅಪರಾಹ್ಣ 2:30 ಧರ್ಮಸಭೆ ನಡೆಯಲಿದ್ದು, ಶ್ರೀಗಳು ಸಮಸ್ತ ಶಿಷ್ಯಭಕ್ತರಿಗೆ ವ್ಯಾಸಮಂತ್ರಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ.
ಅಭಯಂಕರ ಮಂತ್ರ ಹವನ ಹಾಗೂ ಶ್ರೀಮಹಾಗಣಪತಿಹವನ ಮುಂತಾದ ಧಾರ್ಮಿಕ ಕಾರ್ಯಕ್ರಮ ಬೆಳಗ್ಗೆ ನಡೆಯಲಿದ್ದು, ಸಂಜೆ ಸೂರ್ಯಾಸ್ತಕ್ಕೆ ಸರಿಯಾಗಿ ಶ್ರೀಕರಾರ್ಚಿತ ರಾಮಾದಿದೇವರ ಪೂಜೆಯನ್ನು ಶ್ರೀಗಳು ನೆರವೇರಿಸಲಿದ್ದಾರೆ. ಪ್ರತಿದಿನ ಸಂಜೆ 8.00 ಗಂಟೆಗೆ ಸರಿಯಾಗಿ ಶ್ರೀಶಂಕರಾಚಾರ್ಯ ವಿರಚಿತ ಸಾಧನಾಪಂಚಕ ದ ಕುರಿತು ಪ್ರವಚನವನ್ನು ನಡೆಸಿಕೊಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles