You are here
ಸಿದ್ದು ಶಾದಿ ಭಾಗ್ಯ, ಮೋದಿ ಶಾದಿ ಶಗುನ್!

ಸಿದ್ದು ಶಾದಿ ಭಾಗ್ಯ, ಮೋದಿ ಶಾದಿ ಶಗುನ್!

ಹೈದರಾಬಾದ್: ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಹೆಣ್ಣು ಮಕ್ಕಳಿಗೆ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಾಗ ಭಾರೀ ವಿರೋಧ ವ್ಯಕ್ತಪಟಿಸಿದ್ದ ಬಿಜೆಪಿ ಈಗ ಕೇಂದ್ರ ಸರಕಾರದ ವತಿಯಿಂದ ಇಂತಹುದೇ ಯೋಜನೆಯೊಂದನ್ನು ಜಾರಿಗೆ ತರಲು ಹವಣಿಸುತ್ತಿದೆ.
ರಾಜ್ಯದ ಶಾದಿ ಭಾಗ್ಯದ ಮಾದರಿಯಲ್ಲಿಯೇ ಶಾದಿ ಶಗುನ್ ಎಂಬ ಯೋಜನೆಯನ್ನು ಜರಿಗೆ ತರಲು ನರೇಂದ್ರ ಮೋದಿ ಸರಕಾರ ನಿರ್ಧರಿಸಿದ್ದು ಇದಕ್ಕೆ ಬೇಕಾದ ತಯಾರಿ ನಡೆಸಿದೆ.
ಪದವಿ ಪೂರೈಸಿ ವಿದ್ಯಾರ್ಥಿವೇತನ ಪಡೆಯುತ್ತಿರುವ ಹೆಣ್ಣು ಮಕ್ಕಳ ವಿವಾಹಕ್ಕೆ ‘ಶಾದಿ ಶಗುನ್’ ಯೋಜನೆಯ ಅಡಿಯಲ್ಲಿ ನೆರವು ನೀಡಲಾಗುವುದು. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದೊಡ್ಡಮಟ್ಟದಲ್ಲಿ ಉತ್ತೇಜನ ದೊರೆಯಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್‍ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ವಿದ್ಯಾರ್ಥಿವೇತನಕ್ಕೆ ಅರ್ಹರಾದ ಹೆಣ್ಣು ಮಕ್ಕಳ ವಿವಾಹಕ್ಕೆ 51,೦೦೦ ರು. ಹಣಕಾಸು ನೆರವು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ನಖ್ವಿ ಹೇಳಿದ್ದಾರೆ.

Related Articles