You are here
ಕೊರಟಗೆರೆಯಿಂದಲೇ ಸ್ಪರ್ಧೆ: ಪರಂ

ಕೊರಟಗೆರೆಯಿಂದಲೇ ಸ್ಪರ್ಧೆ: ಪರಂ

ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನ ಹೊರವಲಯದಲ್ಲಿರುವ ಹೆಗ್ಗೆರೆಯಲ್ಲಿ ಭಾನುವಾರ ತಮ್ಮ ಬೆಂಬಲಿಗರ ಸಭೆ ನಡೆಸಿದ ಪರಮೇಶ್ವರ್ ಕೊರಟಗೆರೆ ತೊರೆದು ಬೇರೆ ಕಡೆ ಚುನಾವಣೆಗೆ ಸ್ಪರ್ದಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
೨೦೧೩ರ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋತಿದ್ದ ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆಯ ರೇಸಿನಿಂದ ಹಿಂದೆ ಸರಿಯುವಂತಾಗಿತ್ತು. ಈ ಸೋಲಿಗೆ ಪಕ್ಷದವರೇ ಪಿತೂರಿಯೇ ಕಾರಣ ಎಂದು ಪರಮೇಶ್ವರ್ ನೇರವಾಗಿಯೇ ಆರೋಪಿಸಿದ್ದರು.
ಭಾನುವಾರದ ಸಭೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರು ಈ ಬಾರಿ ಹಿಂದಿಯನ್ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪರಮೇಶ್ವರ್ ಬೇರೆಡೆ ಹೋಗುವ ತಮ್ಮ ನಿರ್ಧಾರವನ್ನು ಬದಲಿಸಿದರು ಎಂದು ತಿಳಿದುಬಂದಿದೆ.

Related Articles