You are here
ಕರುಣ್‌ಗೆ ಕೊಕ್, ರಾಹುಲ್ ವಾಪಸ್

ಕರುಣ್‌ಗೆ ಕೊಕ್, ರಾಹುಲ್ ವಾಪಸ್

ನವದೆಹಲಿ: ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿ ಗಮನ ಸೆಳೆದಿದ್ದ ರಾಜ್ಯದ ಭರವಸೆಯ ಬ್ಯಾಟ್ಸ್‌ಮನ್ ಕರುಣ್ ನಾಯರ್‍ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ಕ್ರಿಕೆಟ್ ತಂಡದಿಂದ ಕೈಬಿಡಲಾಗಿದೆ.
ಈ ಮಾಸಾಂತ್ಯ ಆರಂಭವಾಗಲಿರುವ ಸರಣಿಗೆ ಭಾನುವಾರ ತಂಡವನ್ನು ಆಯ್ಕೆ ಮಾಡಲಾಗಿದ್ದು ಕರುಣ್ ಬದಲಿಗೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ೨೧ರಿಂದ ಆರಂಭವಾಗಲಿರುವ ಪ್ರವಾಸದಲ್ಲಿ ಭಾರತ ತಂಡವು ೩ ಟೆಸ್ಟ್, ೫ ಏಕದಿನ ಹಾಗೂ ಒಂದು ಟಿ೨೦ ಪಂದ್ಯ ಆಡಲಿದ್ದು, ಸದ್ಯ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಸಂದರ್ಭ ಗಾಯಗೊಂಡು ಹೊರಗುಳಿದಿದ್ದ ಆರಂಭಿಕ ಕೆ.ಎಲ್. ರಾಹುಲ್ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಶಿಖರ್‍ ಧವನ್ ಅವರನ್ನು ಕೈಬಿಡಲಾಗಿದೆ.
ತಂಡ ಇಂತಿದೆ
ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಅಶ್ವಿನ್, ಜಡೇಜಾ, ವೃದ್ಧಿಮಾನ್ ಸಾಹ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್‍, ಮೊಹಮದ್ ಶಮಿ, ಕುಲ್ದೀಪ್ ಯಾದವ್ ಹಾಗೂ ಅಭಿನವ್ ಮುಕುಂದ್.

Related Articles