You are here
ಭಾರತದ ವಿರುದ್ಧ ವಿಂಡೀಸ್ ಸವಾರಿ

ಭಾರತದ ವಿರುದ್ಧ ವಿಂಡೀಸ್ ಸವಾರಿ

ಲೆವಿಸ್ ಶತಕ: ಏಕೈಕ ಟಿ೨೦ಯಲ್ಲಿ ಸೋಲು

ಕಿಂಗ್ಸ್‌ಟನ್: ಸ್ಫೋಟಕ ಆರಂಭಿಕ ಎವಿನ್ ಲೆವಿಸ್ ಗಳಿಸಿದ ಭರ್ಜರಿ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧದ ಏಕೈಕ ಟಿ೨೦ ಪಂದ್ಯದಲ್ಲಿ ಜಯಭೇರಿ ಬಾರಿಸಿದೆ.
ಟಾಸ್ ಗೆದ್ದು ಭಾರತಕ್ಕೆ ಮೊದಲ ಬ್ಯಾಟಿಂಗ್ ವೀಳ್ಯ ನೀಡದ ವೆಸ್ಟ್ ಇಂಡೀಸ್ ಪಂದ್ಯ ಗೆಲ್ಲಲು ೧೯೧ ರನ್ ಗಳಿಸಬೇಕಾದ ಸವಾಲು ಎದುರಿಸಿತು. ಆದರೆ ಭಾರತದ ಬಗ್ಗೆ ವಿಶೇಷ ಮಮಕಾರ ಹೊಂದಿರುವಂತೆ ತೋರುವ ಲೆವಿಸ್ ಎರಡನೇ ಶತಕ ದಾಖಲಿಸುವ ಮೂಲಕ ಈ ಸವಾಲನ್ನು ಸುಲಭ ಸಾಧ್ಯವಾಗಿಸಿದರು.
ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡದ ಲೆವಿಸ್ ಭಾರತದ ದಾಳಿಯನ್ನು ಮನಬಂದಂತೆ ಚೆಂಡಾಡಿ ಕೇವಲ ೬೨ ಎಸೆತಗಳಲ್ಲಿ ೧೨ ಸಿಕ್ಸರ್‍ ಮತ್ತು ೬ ಬೌಂಡರಿ ಒಳಗೊಂಡ ಅಜೇಯ ೧೨೫ ರನ್ ಸಂಪಾದಿಸಿ ಏಕಾಂಗಿಯಾಗಿ ತಂಡವನ್ನು ಜಯದ ಗೆರೆ ದಾಟಿಸಿದರು. ವಿಂಡೀಶ್ ತಂಡವು ಕೇವಲ ಒದು ವಿಕೆಟ್ ನಷ್ಟಕ್ಕೆ ಭಾರತದ ಸವಾಲನ್ನು ಮೆಟ್ಟಿ ನಿಂತಿತು.
ಸ್ಕೋರು ಪಟ್ಟಿ
ಭಾರತ ೬ಕ್ಕೆ ೧೯೦. ದಿನೇಶ್ ಕಾರ್ತಿಕ್ ೪೮, ವಿರಾಟ್ ಕೊಹ್ಲಿ ೩೯, ರಿಶಬ್ ಪಂತ್ ೩೮, ಜೆರೋಮ್ ಟೇಲರ್‍ ೩೧ಕ್ಕೆ ೨.
ವೆಸ್ಟ್ ಇಂಡೀಸ್ ೧ಕ್ಕೆ ೧೯೪ (೧೮.೩ ಓವರ್‍). ಲೆವಿಸ್ ಅಜೇಯ ೧೨೫, ಸ್ಯಾಮ್ಯುಯೆಲ್ಸ್ ಅಜೇಯ ೩೬, ಕುಲ್ದೀಪ್ ಯಾದವ್ ೩೪ಕ್ಕೆ ೧.

Related Articles