You are here
ಗುರುಗಳು ಸದಾ ಪ್ರಾತಃ ಸ್ಮರಣೀಯರು: ಶಾಸಕ ಮುನಿರತ್ನ

ಗುರುಗಳು ಸದಾ ಪ್ರಾತಃ ಸ್ಮರಣೀಯರು: ಶಾಸಕ ಮುನಿರತ್ನ

ಬೆಂಗಳೂರು: ಪೂಜ್ಯ ಗುರುಗಳು ಹಾಗೂ ಗುರು ಸ್ಥಾನದಲ್ಲಿರುವ ಎಲ್ಲರನ್ನೂ ನಾವು ಸದಾ ಸ್ಮರಿಸಬೇಕಾಗಿದೆ. ನಮ್ಮ ಏಳಿಗೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವು ನೀಡುವವರನ್ನೂ ನಾವು ನೆನೆಸಿಕೊಳ್ಳಬೇಕು ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ತಿಳಿಸಿದ್ದಾರೆ.

ಗುರುಪೂರ್ಣಿಮೆ ಅಂಗವಾಗಿ ಲಗ್ಗೆರೆ ಶ್ರೀ ಶಿರಡಿ ಸಾಯಿಬಾಬಾ ದೇವಾಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಶಾಸಕರು ಮಾತನಾಡಿದರು.

This slideshow requires JavaScript.

ಗುರುಭಕ್ತಿಯನ್ನು ನಾವು ಎಂದಿಗೂ ಆಚರಿಸಿಕೊಂಡು, ಪಾಲಿಸಿಕೊಂಡು ಬರಬೇಕು. ಯಾವುದೇ ಕಾರಣಕ್ಕೂ ನಮ್ಮ ಬೆನ್ನ ಹಿಂದೆ ನಿಂತು ಕಾಪಾಡುವವರನ್ನು ಸ್ಮರಿಸಬೇಕು ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಮುನಿರತ್ನ, ಮೋಹನ್‍ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಾಲಿಕೆ ಸದಸ್ಯ ಮೋಹನ್‍ ಕುಮಾರ್‍, ಸಿದ್ದೇಗೌಡ, ಸ್ಥಳೀಯ ಕಾಂಗ್ರೆಸ್‍ ಮುಖಂಡರು, ಕಾರ್ಯಕರ್ತರು, ಸ್ಥಳೀಯ ನಾಗರಿಕರು ಹಾಜರಿದ್ದರು.

Related Articles