You are here
ಕ್ಷೇತ್ರದ ಅಭಿವೃದ್ಧಿಯೇ ನಮ್ಮಮುಖ್ಯ ಗುರಿ: ಶಾಸಕ ಮುನಿರತ್ನ

ಕ್ಷೇತ್ರದ ಅಭಿವೃದ್ಧಿಯೇ ನಮ್ಮಮುಖ್ಯ ಗುರಿ: ಶಾಸಕ ಮುನಿರತ್ನ

ಬೆಂಗಳೂರು: ತ್ವರಿತ ಗತಿಯಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕ್ಷೇತ್ರದಲ್ಲಿ ಸೌಕರ್ಯ ಅಭಿವೃದ್ಧಿಗೆ ಹೆಚ್ಚುಒತ್ತು ನೀಡುವುದೇ ನಮ್ಮ ಗುರಿ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮನಿರತ್ನ ತಿಳಿಸಿದ್ದಾರೆ.

ಅವರು ವಾರ್ಡ್ ಸಂಖ್ಯೆ 73ರ ಕೊಟ್ಟಿಗೆಪಾಳ್ಯ  ಹಾಗೂ ನರಸಿಂಹನಪಾಳ್ಯ, ಸುಮ್ಮನಹಳ್ಳಿಯಲ್ಲಿ ಕಾಂಕ್ರೀಟ್‍ ರಸ್ತೆಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು.

This slideshow requires JavaScript.

ಕ್ಷೇತ್ರದಲ್ಲಿ ಈಗ  ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ಸಾಗುತ್ತಿವೆ. ನಾಗರಿಕರಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ನೀಡಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುನಿರತ್ನ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್‍ ಜಿ. ಮೋಹನ್‍ ಕುಮಾರ್, ವಾರ್ಡ್ ಅಧ್ಯಕ್ಷ ಅಮರ್ ನಾಥ್, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.

Related Articles