You are here
ಸೂಟ್‌ಕೇಸ್ ನಾಯಕರು ಜೆಡಿಎಸ್‌ ಬಿಟ್ಟಿದ್ದಾರೆ

ಸೂಟ್‌ಕೇಸ್ ನಾಯಕರು ಜೆಡಿಎಸ್‌ ಬಿಟ್ಟಿದ್ದಾರೆ

ಬೆಂಗಳೂರು: ಸೂಟ್‌ಕೇಸ್ ರಾಜಕಾರಣಿಗಳೂ ಈಗ ಜೆಡಿಎಸ್‌ನಲ್ಲಿಲ್ಲ. ಅವರಿಂದ ಪಕ್ಷ ಮುಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷದ ಭಿನ್ನ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಕುಮಾರಸ್ವಾಮಿ ಯುವ ಮುಖಂಡ ಪ್ರಜ್ವಲ್ ಹೇಳಿರುವಂತೆ ಸೂಟ್‌ಕೇಸ್ ರಾಜಕಾರಣ ಮಾಡಿತ್ತ ಮುಂದಿನ ಸಾಲಿನಲ್ಲಿ ಕಳಿತುಕೊಳ್ಳುತ್ತಿದ್ದ ನಾಯಕರು ಈಗ ಪಕ್ಷದಿಂದ ಹೊರಗಿದ್ದಾರೆ. ಬಹುಶಃ ಅವರನ್ನು ಉದ್ದೇಶಿಸಿಯೇ ಪ್ರಜ್ವಲ್ ಆ ಮಾತುಗಳನ್ನು ಆಡಿರಬೇಕೇ ಹೊರತು ಸದ್ಯದ ಮುಖಂಡರ ಬಗ್ಗೆಯಂತೂ ಅಲ್ಲ ಎಂದರು.
ಈ ಮುಂಚೆ ಜೆಡಿಎಸ್‌ನಲ್ಲಿ ಸೂಟ್‌ಕೇಸ್ ರಾಜಕಾರಣ ಮಾಡುವ ಮುಖಂಡರು ಇದ್ದರು. ಸೂಟ್‌ಕೇಸ್ ಪಡೆದು ಮುಂದಿನ ಸಾಲಿನಲ್ಲಿ ಕುಳಿತಿಕೊಳ್ಳುತ್ತಿದ್ದ ನಾಯಕರಿಂದ ಅದೃಷ್ಟವಶಾತ್ ಈಗ ಪಕ್ಷ ಮುಕ್ತವಾಗಿದೆ. ಇದೇ ಸಮಾಧಾನಕರ ವಿಚಾರ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಜ್ವಲ್ ತಪ್ಪು ಕೇಳುವಂತಹ ಯಾವುದೇ ತಪ್ಪು ಮಾಡಿಲ್ಲ. ಅವರು ಹೇಳಿರುವುದು ಈಗ ಪಕ್ಷ ಬಿಟ್ಟು ಹೋಗಿರುವವರ ಬಗ್ಗೆಯೇ ಇರಬೇಕೆಂದು ಭಾವಿಸುತ್ತೇನೆ ಎಂದು ಅವರು ಹೇಳಿದರು.

Related Articles