You are here
ಉಪರಾಷ್ಟ್ರಪತಿ: ಗಾಂಧಿಗೆ ವಿಪಕ್ಷ ಮಣೆ

ಉಪರಾಷ್ಟ್ರಪತಿ: ಗಾಂಧಿಗೆ ವಿಪಕ್ಷ ಮಣೆ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಹುರಿಯಾಳು ನಿರ್ಧರಿಸುವಲ್ಲಿ ವಳಂಬ ನೀತಿ ಅನುಸರಿಸಿ ಮುಖಭಂಗ ಅನುಭವಿಸಿದ ಪ್ರತಿಪಕ್ಷಗಳು ಉಪರಾಷ್ಟ್ರಪತಿ ಚುನಾವಣೆಗೆ ಗೋಪಾಲ್ ಕೃಷ್ಣ ಗಾಂಧಿ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿವೆ.
ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿ ಅವರನ್ನು ಉಪ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಮಂಗಳವಾರ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಉಪ ರಾಷ್ಟ್ರಪತಿ ಚುನಾವಣೆಯನ್ನು ಆಗಸ್ಟ್ 7ರಂದು ನಡೆಸಲಾಗುವುದು
ಸಭೆಯ ನಿರ್ಧಾರವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರು ಗೋಪಾಲ್ ಗಾಂದಿ ಅವರಿಗೆ ಮನವರಿಕೆ ಮಾಡಿದರು. ಒಪ್ಪಿಗೆ ಸೂಚಿಸಲು ಕೆಲ ಸಮಯ ತೆಗೆದುಕೊಂಡ ಗಾಂಧಿ ಕೊನೆಗೂ ಹೂಂ ಎಂದರು. ಗಾಂಧಿ ಈ ಹಿಂದೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು.

Related Articles