You are here
ಭಾರತ ಕ್ರಿಕೆಟ್‌ಗೆ ಶಾಸ್ತ್ರಿ ಕೋಚ್

ಭಾರತ ಕ್ರಿಕೆಟ್‌ಗೆ ಶಾಸ್ತ್ರಿ ಕೋಚ್

ಜಹೀರ್‍ ಖಾನ್ ಬೌಲಿಂಗ್ ಕೋಚ್

ಮುಂಬೈ: ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೆ ರವಿಶಾಸ್ತ್ರಿ ಯುಗ ಆರಂಭವಾಗಿದೆಯೇ? ಅನಿಲ್ ಕುಂಬ್ಳೆ ರಾಜೀನಾಮೆಯಿಂದ ತೆರವಾಗಿದ್ದ ಭಾರತೀಯ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ರವಿ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
ರವಿ ಶಾಸ್ತ್ರಿಗೆ ಕೋಚ್ ಹುದ್ದೆ ನೀಡಿದ ಬೆನ್ನಲ್ಲಿಯೇ ಮಾಜಿ ವೇಗಿ ಜಹೀರ್‍ ಆನ್ ಅವರನ್ನು ಭರತ ತಂಡದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಐ ತಿಳಿಸಿದೆ.
ನಾಯಕ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರ ಪಾಲಿಗೆ ಒಂದು ರೀತಿ ಅಂದರಿಕಿ ಮಂಚಿವಾಡು (ಎಲ್ಲರಿಗೂ ಬೇಕಾದವ) ಎಂಬಂತಿರುವ ರವಿ ಶಸ್ತ್ರಿ ಆಯ್ಕೆ ಬಹುತೇಕ ನಿಚ್ಚಳವಾಗಿತ್ತು. ಅನಿಲ್ ಕುಂಬ್ಳೆ ಪದತ್ಯಾಗದ ನಂತರ ಶಾಸ್ತ್ರಿ ಕೋಚ್ ಹುದ್ದೆ ಆಯ್ಕೆಗೆ ಅರ್ಜಿ ಸಲ್ಲಿಸಿದ್ದರು. ಭಾರತೀಯ ಕ್ರಿಕೆಟ್‌ನ ಎಲ್ಲ ರಂಗಗಳಲ್ಲಿ ಆವರಿಸಿಕೊಂಡಿರುವ ರವಿ ಶಾಸ್ತ್ರಿಗೆ ಈ ಹೊಣೆಗಾರಿಕೆ ಹೊಸದೇನಲ್ಲ. ಈ ಹಿಂದೆ ೨೦೧೪ರಿಂದ ೨ ವರ್ಷ ತಂಡದ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದರು.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಒಟ್ಟು 10 ಮಂದಿ ಅರ್ಜಿ ಸಲ್ಲಿಸಿದ್ದರು. ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಲಾಲ್ ಚಂದ್, ಫಿಲ್ ಸಿಮನ್ಸ್, ದೊಡ್ಡ ಗಣೇಶ್, ರಿಚರ್ಡ್ ಪೈಬಸ್ ಇವರಲ್ಲಿ ಪ್ರಮುಖರಾಗಿದ್ದರು. 

 

Related Articles