You are here
ಲಾಲು-ನಿತೀಶ್ ದೋಸ್ತಿ ಕೊನೆ ಸನ್ನಿಹಿತ?

ಲಾಲು-ನಿತೀಶ್ ದೋಸ್ತಿ ಕೊನೆ ಸನ್ನಿಹಿತ?

ತೇಜಸ್ವಿ ಯಾದವ್ ರಾಜೀನಾಮೆಗೆ ೪ ದಿನದ ಗಡುವು

ಪಾಟ್ನಾ: ಬಿಹಾರದಲ್ಲಿ ನಿತೀಶ್ ಮತ್ತು ಲಾಲು ನಡುವಿನ ಮೈತ್ರಿ ಕೊನೆಗಾಣುವ ಸೂಚನೆಗಳು ಕಂಡುಬಂದಿವೆ. ಉಪಮುಖ್ಯಮಂತ್ರಿಯೂ ಆಗಿರುವ ಲಾಲು ಪುತ್ರ ತೇಜಸ್ವಿ ಯಾದವ್ ವಿರುದ್ಧ ಸಿಬಿಐ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಅವರ ಮುಂದುವರಿಕೆ ಕುರಿತು ನಿರ್ಧಾರಕೈಗೊಳ್ಳಲು ಮುಖ್ಯಮಂತ್ರಿ ನಿತೀಶ್ ಕುಮಾರ್‍ ಲಾಲೂಗೆ ನಾಲ್ಕು ದಿನಗಳ ಗಡುವು ನೀಡಿರುವುದಾಗಿ ವರದಿಯಾಗಿದ್ದು. ಇದನ್ನು ಮೈತ್ರಿ ಮುರಿಯುವ ಮುನ್ಸೂಚನೆ ಎಂದೇ ಬಣ್ಣಿಸಲಾಗುತ್ತಿದೆ.
ಸೋಮವಾರ ತ್ಮ ಪಕ್ಷ ಆರ್‌ಜೆಡಿ ಸಭೆ ಡೆಸಿ ತೇಜಸ್ವಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಾರಿದ್ದ ಲಾಲುಗೆ ಇದು ತಿರುಗುಬಾಣವಾಗಿ ಪರಿಣಮಿಸಿದೆ. ಮಂಗಳವಾರ ಜೆಡಿಯು ಸಭೆಯಲ್ಲಿ ಮಾತನಾಡಿದ ನಿತೀಶ್ ಕುಮಾರ್‍ ಅವರು ತೇಜಸ್ವಿ ಮುಂದುವರಿಕೆ ವಿಚಾರವಾಗಿ ಆರ್‌ಜೆಡಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. ಇದಕ್ಕೆ ತಪ್ಪಿದರೆ ನಾಲ್ಕು ದಿನಗಳ ನಂತರ ನಡೆಯುವ ಸಂಪುಟ ಸಭೆಯಲ್ಲಿ ತೇಜಸ್ವಿ ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಹಾಗೂ ಪ್ರಸ್ತುತ ಬಂದಿರುವ ಆರೋಪದ ಬಗ್ಗೆ ತೇಜಸ್ವಿ ಅವರು ವಿವರಣೆ ಹಾಗೂ ಸ್ಪಷ್ಟನೆ ನೀಡಬೇಕು ಎಂದೂ ನಿತೀಶ್ ಕುಮಾರ್ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೆಲ್ಲ ಗಮನಿಸಿದರೆ ನಿತೀಶ್ ಅವರು ಲಾಲು ಸಖ್ಯ ತೊರೆಯುವ ದಿನಗಳು ದೂರವಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

Related Articles