You are here
ವಿಶ್ವ ದಾಖಲೆ ಬರೆದ ಮಿಥಾಲಿ

ವಿಶ್ವ ದಾಖಲೆ ಬರೆದ ಮಿಥಾಲಿ

ಬ್ರಿಸ್ಟಲ್: ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮಹಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಕೆಯ ವಿಶ್ವ ದಾಖಲೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಟಲ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನ ಅನಭಿಷಿಕ್ತ ರಾಣಿ ಎನಿಸಿದರು.
ಈ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ಸ್‌ ಅವರ ೫೯೯೨ ಈವರೆಗಿನ ದಾಖಲೆ ಮುರಿಯಲು ೩೩ ರನ್ ಗಳಿಸಬೇಕಿದ್ದ ಮಿಥಾಲಿ ಅದನ್ನು ಪೂರೈಸಿದ್ದೇ ಅಲ್ಲದೇ ೬೦೦೦ ರನ್ ಗಡಿ ದಾಟಿದ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್‍ ಎಂಬ ಗೌರವಕ್ಕೂ ಪಾತ್ರರಾದರು. ಮಿಥಾಲಿ ತಮ್ಮ ೧೮ ವರ್ಷಗಳ ವೃತ್ತಿಬದುಕಿನಲ್ಲಿ ಈವರೆಗೆ ೧೮೩ ಏಕದಿನ ಪಂದ್ಯಗಳನ್ನಾಡಿದ್ದು ೬೦೨೮ ರನ್ ಗಳಿಸಿದ್ದಾರೆ

Related Articles