You are here
ಮಹದಾಯಿ ಮಾತಾಡೋಣ ಬನ್ನಿ: ಪಾರಿಕ್ಕರ್‌ಗೆ ಸಿದ್ದು

ಮಹದಾಯಿ ಮಾತಾಡೋಣ ಬನ್ನಿ: ಪಾರಿಕ್ಕರ್‌ಗೆ ಸಿದ್ದು

ಬೆಂಗಳೂರು: ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರು ಕಲ್ಪಿಸುವ ಕರ್ನಾಟಕದ ಪ್ರಯತ್ನಕ್ಕೆ ಮಹಾರಾಷ್ಟ್ರ ಬೆಂಬಲ ಸೂಚಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದಿರುವ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಇದೇ ವೇಳೆ ಕಳಸಾ ಬಂಡೂರಿ ಯೋಜನೆಗೆ ಖಳನ ಸ್ಥಾದಲ್ಲಿರುವ ಗೋವಾದ ಮನವೊಲಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರಿಗೂ ಮನವಿ ಮಾಡಿದ್ದಾರೆ.
ಸುಪ್ರೀಮ ಕೋರ್ಟ್‌ನ ಸಲಹೆಯಂತೆ ತ್ರಿಪಕ್ಷೀಯ ಮಾತುಕತೆಗೆ ಬರುವಂತೆ ಸಿದ್ದರಾಮಯ್ಯನವರು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದು ಕೇಳಿಕೊಂಡಿದ್ದಾರೆ. ಕಳೆದ ಮೇ. ೩೦ರಂದು ಸಹ ಇಂತಹುದೇ ಮನವಿ ಪತ್ರವನ್ನು ಗೋವಾ ಮುಖ್ಯಮಂತ್ರಿಗೆ ಬರೆಯಲಾಗಿತ್ತಾದರೂ ಅವರು ಅದಕ್ಕೆ ಸ್ಪಂದಿಸಿರಲಿಲ್ಲ.

Related Articles